
ಸಂಜೆವಾಣಿ ವಾರ್ತೆ
ಹಿರಿಯೂರು.ಅ.13-ನಗರದ ಹುಳಿಯಾರು ರಸ್ತೆಯಲ್ಲಿರುವ ಓಂ ಶಕ್ತಿ ಶ್ರೀ ಅರ್ಧನಾರೀಶ್ವರಿ ಕರುಮಾರಿಯಮ್ಮ ದೇವಾಲಯದಲ್ಲಿ 21ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಇದೇ 15 ರಿಂದ 23ರ ವರೆಗೆ ಏರ್ಪಡಿಸಲಾಗಿದೆ. 15ರ ಭಾನುವಾರ ಚಂಡಿಪಾರಾಯಣ ಬ್ರಾಹ್ಮಿ ಹೋಮ ಮತ್ತು ಅರಿಶಿಣದ ಅಲಂಕಾರ ಇರುತ್ತದೆ, 16 ರಂದು ಮಹೇಶ್ವರಿ ಹೋಮ ಕುಂಕುಮ ಅಲಂಕಾರ ಇರುತ್ತದೆ. 17 ರಂದು ಕೌಮಾರಿ ಹೋಮ ಕಾಯಿತುರಿ ಅಲಂಕಾರ ಇರುತ್ತದೆ. 18ರಂದು ವೈಷ್ಣವಿ ಹೋಮ ಹೆಸರು ಬೇಳೆ ಅಲಂಕಾರ ಇರುತ್ತದೆ. 19ರಂದು ವಾರಾಹಿ ಹೋಮ ಶಾಕಾಂಬರಿ ಅಲಂಕಾರ ಇರುತ್ತದೆ, 20ರಂದು ಚಂಡಿ ಸರಸ್ವತಿ ಸೂಕ್ತ ಪಾರಾಯಣ ಸರಸ್ವತಿ ಹೋಮ ಸರಸ್ವತಿ ಅಲಂಕಾರ ಇರುತ್ತದೆ. 21 ರಂದು ಚಂಡಿಪಾರಾಯಣ ಇಂದ್ರಾಣಿ ಹೋಮ ಹಾಗೂ ಹಣ್ಣಿನ ಅಲಂಕಾರ ಇರುತ್ತದೆ. 22ರ ಭಾನುವಾರ ಚಂಡಿ ದುರ್ಗಾ ಸೂಕ್ತ ಪಾರಾಯಣ ದುರ್ಗಾ ಅಲಂಕಾರ ಇರುತ್ತದೆ. 23 ರಂದು ಶ್ರೀ ಸೂಕ್ತ ಪಾರಾಯಣ ಲಕ್ಷ್ಮಿ ಹೋಮ ರಜತ ಕವಚ ಅಲಂಕಾರ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಕಾರ್ಯಕ್ರಮ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಿ ಉಪಾಸಕರಾದ ಶ್ರೀ ಯೋಗಾನಂದ ಭಾರತಿ ಸ್ವಾಮಿಗಳು ಮನವಿ ಮಾಡಿದ್ದಾರೆ.