ಕರುನಾಡ ವಿಜಯ ಸೇನೆ ಪದಾಧಿಕಾರಿಗಳ ಪದಗ್ರಹಣ

ಲಕ್ಷ್ಮೇಶ್ವರ,ನ.19: ಲಕ್ಷ್ಮೇಶ್ವರ ತಾಲೂಕ ಕರುನಾಡ ವಿಜಯ ಸೇನೆಯ ತಾಲೂಕ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎಪಿಎಂಸಿ ಪಕ್ಷದ ಕಚೇರಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಗದಗ ಜಿಲ್ಲಾ ಕರುನಾಡ ವಿಜಯ ಸೇನೆ ಅಧ್ಯಕ್ಷ ಭೀಮಣ್ಣ ಇಂಗಳೆ ಶರಣಪ್ಪ ಗೊಳಗೊಳಕಿ ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿ ಚಾಲನೆ ನೀಡಿದರು.
ಪದಾಧಿಕಾರಿಗಳಿಗೆ ಕರುನಾಡ ವಿಜಯ ಸೇನೆಯ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಭೀಮಣ್ಣ ಇಂಗಳೇ ಅವರು ಕರುನಾಡ ವಿಜಯ ಸೇನೆ ಕನ್ನಡದ ಭಾಷೆ ನೆಲ ಜಲ ಇವುಗಳಿಗೆ ಧಕ್ಕೆಯಾದರೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಕನ್ನಡದ ನಾಡಿನಲ್ಲಿ ಕನ್ನಡಿಗರೇ ಅಪ್ರತಿಮರು. ಅನ್ಯ ಭಾಷೆಕರು ಕನ್ನಡದ ಮೇಲೆ ಕನ್ನಡಿಗರ ಮೇಲೆ ಆಕ್ರಮಣ ಮಾಡಿದರೆ ಪ್ರತಿಯಾಗಿ ಆಕ್ರಮಣ ಮಾಡಿ ಹೋರಾಟ ಮಾಡುವುದಾಗಿ ಹೇಳಿದರು.
ತಾಲೂಕ ಘಟಕದ ನೂತನ ಅಧ್ಯಕ್ಷ ಮಂಜುನಾಥ್ ಹೊಗೆಸೊಪ್ಪಿನ್ ಅವರು ಮಾತನಾಡಿ ಕರುನಾಡ ವಿಜಯ ಸೇನೆಯನ್ನು ಜನರ ನಾಡಿ ಬಡಿತವಾಗಿ ಜನರ ಧ್ವನಿಯಾಗಿ ಸ್ಪಂದಿಸುವ ಮೂಲಕ ವಿಶೇಷ ಸೇವೆಯನ್ನು ನೀಡುವುದಲ್ಲದೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನರ ಸಮಸ್ಯೆಗಳಿಗೆ ಹತ್ತಿರವಾಗುವದಾಗಿ ಹೇಳಿದರಲ್ಲದೆ ವೇದಿಕೆಯ ಕಾರ್ಯಕರ್ತರು ಹೆಸರಿಗೆ ಮಾತ್ರ ಪದಾಧಿಕಾರಿಗಳಾಗದೆ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಕರುನಾಡ ವಿಜಯ ಸೇನೆಯ ಉಪಾಧ್ಯಕ್ಷ ಶರಣಪ್ಪ ಗೊಳಗೊಳಕಿ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಗೋಳಗುಳಿಕಿ, ಯೂಸುಫ್ ಸಾಬ್ ಡಂಬಳ, ರಿಯಾಜ್ ಅಹ್ಮದ್ ಗದಗ್ ಸೇರಿದಂತೆ ಅನೇಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ವೇದಿಕೆಯ ಮೇಲೆ ಜಗದೀಶ್ ಆರ್.ಎಂ.ಆರ್. ರಮೇಶ್ ಸೇರಿದಂತೆ ಅನೇಕರಿದ್ದರು. ಹನುಮಂತ ಶರಶೂರಿ ಸ್ವಾಗತಿಸಿದರೆ ವಾಸು ಬೊಮಲೆ ನಿರ್ವಹಿಸಿದರು.