ಕರುನಾಡಿನ ಸ್ವಾಭಿಮಾನದ ಸಂಕೇತ ಕನ್ನಡ ರಾಜ್ಯೋತ್ಸವ

ಕೋಲಾರ, ನ.೩- ಏಕೀಕರಣ ಚಳುವಳಿ ೧೯ನೆಯ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ ೧೯೫೬ ರಾಜ್ಯ ಪುನರ್ ಸಂಘಟನೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು. ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗೂ ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು. ಅಂದಿನಿಂದ ನವೆಂಬರ್ ೧ ನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಇದು ಕನ್ನಡಿಗರ ಹೆಮ್ಮೆಯ ಹಬ್ಬ ಕರುನಾಡಿನ ಸ್ವಾಭಿಮಾನದ ಸಂಕೇತ ಎಂದು ಕರ್ನಾಟಕ ರಾಜ್ಯ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕಲಾವಿದವಿಷ್ಣು ತಿಳಿಸಿದರು.
ನಗರದ ಗೌರಿಪೇಟೆಯ ಕೇರಾ ಜಿಲ್ಲಾ ಕಛೇರಿಯಲ್ಲಿ ಕೋವಿಡ್ ಕಾರಣದಿಂದ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಕೇರಾ ಜಿಲ್ಲಾ ಸಂಘವು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕನ್ನಡಕ್ಕೊಂದು ಬಾವುಟ ಅವಶ್ಯಕತೆಯನ್ನು ಮನಗೊಂಡ ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿಗಳು ಹಳದಿ ಹಾಗೂ ಕೆಂಪು ಬಣ್ಣ ಬಳಸಿ, ಬಾವುಟವನ್ನು ಸಿದ್ದಪಡಿಸಿದರು. ಮೂಲತಃ ಹಳದಿ ಬಣ್ಣವು ಕನ್ನಡಾಂಬೇಯ ಆರಿಶಿನ ಮತ್ತು ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ.
ಕನ್ನಡಿಗರೂ ಶಾಂತಿಗೆ ಬದ್ಧ, ಕ್ರಾಂತಿಗೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ ಎಂದರು.
ಕೇರಾ ಸಂಘದ ವಿವಿಧ ಪದಾಧಿಕಾರಿಗಳು ಮಾತನಾಡಿ ನಾವು ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ.
ಒಂದು ತಿಂಗಳ ಕಾಲ ಎಲ್ಲೆಡೆ ಕನ್ನಡದ ಡಿಂಡಿಮ ಮೊಳಗಲಿದೆ. ಆದರೆ ಇಂದು ಕನ್ನಡ ಮಾತನಾಡುವಂತೆ, ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಇದೆ. ಎಂದು ವಿಷಾಧಿಸಿದರು.
ಕೇರಾ ಸಂಘದ ಪದಾಧಿಕಾರಿಗಳಾದ ಪಾಲ್ಗುಣ,ಎಂ.ಆರ್. ಚೇತನ್ ಬಾಬು, ಆರ್.ಶಿವಕುಮಾರ್‌ಗೌಡ ಉಪಾಧ್ಯಕ್ಷ ರಾಜ್‌ಕುಮಾರ್, ಆಲ್ಬರ್ಟ್ ಮನೋರಾಜ್, ಮೋಹನ್‌ರಾಜ್, ಚಂದ್ರಶೇಖರ್, ಡಾ||ಮೋಹನ್, ಸುದರ್ಶನ್, ಟೈಗರ್ ವೆಂಕಟೇಶ್, ನಾರಾಯಣ ವಿಭೂ ಮತ್ತಿತರು ಭಾಗವಸಿದ್ದರು.