ಕರುಣಾ ಟ್ರಸ್ಟ್ ನಿಂದ ಮನೆಕೆಲಸದವರಿಗೆ ದಿನಸಿ ಕಿಟ್ ವಿತರಣೆ

ದಾವಣಗೆರೆ.ಮೇ.೨೬; ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಪ್ರಸ್ತುತ ಕೋವಿಡ್ ನಿಂದಾಗಿ ತುಂಬಾ ಸಂಕಷ್ಟದಲ್ಲಿರುವ  ಮನೆಕೆಲಸ ಮಾಡುವ ಹೆಣ್ಣು ಮಕ್ಕಳಿಗೆ,ಬಾಡಿಗೆ ಆಟೋ ಓಡಿಸುವ  ಡ್ರೈವರ್ ಗಳಿಗೆ, ಕೂಲಿ ಮಾಡುವವರಿಗೆ ಒಟ್ಟು120 ರೇಷನ್ ಕಿಟ್ ಗಳನ್ನು ವಿತರಿಸಲಾಯಿತು. ಇನ್ನೂ 400 ಕಿಟ್ ಗಳನ್ನು ವಿತರಿಸುವ ಉದ್ದೇಶವನ್ನು ಕರುಣಾ ಟ್ರಸ್ಟ್ ಹೊಂದಿದೆ.
ಕರುಣಾ ಟ್ರಸ್ಟಿನ ಕಾರ್ಯದರ್ಶಿಗಳಾದ  ಶಿವನಕೆರೆ ಬಸವಲಿಂಗಪ್ಪನವರು ಮತ್ತು  ನಿರ್ದೇಶಕರಾದ      ಶ್ರೀಮತಿ ಮಂಜುಳ ಬಸವಲಿಂಗಪ್ಪನವರು    ಅತ್ಯಂತ ಬಡವರನ್ನು ಹುಡುಕಿ   ದಿನಸಿ ಪ್ಯಾಕೆಟ್ ಗಳನ್ನು ವಿತರಿಸಿದರು.