ಕರುಣಾಧಾಮ ಸೇವಾ ಟ್ರಸ್ಟ್‌ ನಿಂದ  ಸ್ಪೂರ್ತಿ ದಿನ” ಆಚರಣೆ

ದಾವಣಗೆರೆ. ಮಾ.೧೮; ನಟ ದಿ.ಡಾ. ಪುನೀತ್‌ರಾಜ್‌ ಕುಮಾರ್‌ ರವರ 48 ನೇ ಜನ್ಮ ದಿನವನ್ನು ಸ್ಪೂರ್ತಿ ದಿನವನ್ನಾಗಿ ಸರ್ಕಾರ ಘೋಷಿಸಿರವುದು ಅಭಿಮಾನಿಗಳಿಗೆ ಸಂತಸ ತಂತಿದೆ.ಶ್ರೀ ಕರುಣಾಧಾಮ ಸೇವಾ ಟ್ರಸ್ಟ್ (ರಿ) ದಾವಣಗೆರೆ ಇವರ ವತಿಯಿಂದ “ಹಸಿದವರಿಗೆ ಅನ್ನ ಕೊಟ್ಟರೆ ದೇವರಿಗೆ ಸಾಲ ಕೊಟ್ಟಂತೆ” ಎಂಬ ನುಡಿಯಂತೆ  ಬೀದಿಯಲ್ಲಿರುವ ನಿರಾಶ್ರಿತರು, ಅಂಗವಿಕಲರು, ಅನಾಥರು, ಭಿಕ್ಷುಕರಿಗೆ ಉಪಹಾರ ಮತ್ತು ನೀರಿನ ಬಾಟಲ್ ಕೊಡುವುದರ ಮುಖಾಂತರ ವಿಶೇಷವಾಗಿ ಸ್ಫೂರ್ತಿ ದಿನಾಚರಣೆ” ಯನ್ನು ಆಚರಿಸಲಾಯಿತು.ಹಾಗೂ  ಹರಿಹರ ನಗರದ ಶಿಬಾರದಲ್ಲಿ ಒಬ್ಬ ಬಡ ಮಹಿಳೆಗೆ ಉಧ್ಯಮಶೀಲ ಮಹಿಳೆಯಾಗಲು ಹೊಲಿಗೆ ಯಂತ್ರವನ್ನು ಕೊಡುವುದರ ಮುಕಾಂತರ ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಕಾರ್ಯವನ್ನು ಮಾಡಿದ ಶ್ರೀ ಕರುಣಾಧಾಮ ಸೇವಾ ಟ್ರಸ್ಟ್ ನ ಕಾರ್ಯವನ್ನು ನೆರೆದವರು ಶ್ಲಾಘಿಸಿದರು ಎಂದು ಶ್ರೀ ಕರುಣಾಧಾಮ ಸೇವಾ ಟ್ರಸ್ಟ್ (ರಿ) ಸಂಸ್ಥಾಪಕರಾದ ಶ್ರೀನಿವಾಸ್‌ ಇಂಡಿ ತಿಳಿಸಿದರು.ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಅಶೋಕ್‌ ರಾಜ್‌, ಕೇಶವ ಮೂರ್ತಿ ಕೆ ಸಿ, ಅಮಿತಾ ಎಸ್‌ ,ವಿನಯ್‌ ಎಸ್‌ ಐ, ಹಾಗೂ ಸ್ನೇಹಿತರಾದ ಮಲ್ಲಿಕಾರ್ಜುನ ಕಾಮೂರ್ತಿ, ಚಂದ್ರಶೇಖರ್‌ ಕರ್ಜಗಿ, ರಾಜು, ಮೂರ್ತಿ ಬಾಬು, ಮುಕ್ಕಣ್ಣ ಶ್ಯಾವಿ ಉಪಸ್ಥಿತರಿದ್ದರು.