ಕರಿಯಮ್ಮ ದೇವಿಯ ದ್ವಾರ ಬಾಗಿಲು ಕಾಮಗಾರಿಗೆ ಭೂಮಿಪೂಜೆ

ಹಿರಿಯೂರು.ಎ.12: ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಮಸ್ಕಲ್ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ದ್ವಾರ ಬಾಗಿಲು  ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುತ್ತಿರುವುದು ನನ್ನ ಪಾಲಿನ ಅತ್ಯಂತ ಅದೃಷ್ಠವಾಗಿದೆ ಎಂದು   ಜಿ.ಪಂ. ಅದ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಹೇಳಿದರು.   ತಾಲ್ಲೂಕಿನ ಮಸ್ಕಲ್ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ದ್ವಾರ ಬಾಗಿಲು  ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ  ಅವರು ಮಾತನಾಡಿದರು. ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ 21 ಗ್ರಾಮಗಳಿಗೆ ಸಿ.ಸಿ ರಸ್ತೆ, ಬಸ್ ನಿಲ್ದಾಣಗಳು, ಚರ0ಡಿಗಳು, ಆಸ್ಪತ್ರೆ ದುರಸ್ತಿ ಶಾಲೆಗಳ ರಿಪೇರಿ, ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ  ಎಂದರು. ತಾಯಿಯ ಆಶೀರ್ವಾದದಿಂದ   ಮಳೆ-ಬೆಳೆ ಚೆನ್ನಾಗಿ ಆಗಿ ಈ ಭಾಗದ ಜನರು ಉತ್ತಮವಾಗಿ ಜೀವನ  ನಡೆಸುವಂತಾಗಲಿ ಎಂಬುದಾಗಿ  ದೇವರಲ್ಲಿ  ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯೆಯಾದ ಜಯಲಕ್ಷ್ಮಮ್ಮ, ವೆಂಕಟೇಶ್  ಗ್ರಾಮ ಪಂಚಾಯಿತಿಯ ನೂತನ ಸದಸ್ಯರಾದ ಶ್ರೀಮತಿ ಮಂಜುಳ,  ವೀರೇಶ್, ಪದ್ಮಾವತಿ, ರಮ್ಯ, ಕಲಾವತಿ, ತಿಪ್ಪೇಸ್ವಾಮಿ, ವೈ.ನಾಗರಾಜ್, ಎಮ್.ಎ.ಶ್ರೀನಿವಾಸ್, ರಾಜಪ್ಪಸ್ವಾಮಿ. ವೇಲುಸ್ವಾಮಿ ಹಾಗೂ ಇತರೆ ಮುಖ0ಡರು ಭಾಗವಹಿಸಿದ್ದರು.-