ಕರಿಬೇವಿನ ಅನ್ನ

ಬೇಕಾಗುವ ಸಾಮಗ್ರಿಗಳು

*ಅಕ್ಕಿ ಕಾಲು ಕೆ.ಜಿ
*ಕಡಲೆಬೇಳೆ ೧ ಸ್ಪೂನ್
*ಉದ್ದಿನಬೇಳೆ
*ಕರಿಬೇವು ೧ ಕಟ್ಟು
*ತುಪ್ಪ ೨ ಚಮಚ
*ಬೆಳುಳ್ಳಿ ೫ ಎಳಸು
*ಈರುಳ್ಳಿ ೧
*ನಿಂಬೆರಸ ೧ ಚಮಚ
*ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಬಾಣಲಿಗೆ ಎಣ್ಣೆ ಹಾಕದೆ, ಕಡಲೆಬೇಳೆ, ಉದ್ದನಬೇಳೆ, ಕರಿಬೇವನ್ನು ಹುರಿಯಿರಿ, ತಣ್ಣಗಾದ ನಂತರ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲಿಗೆ ತುಪ್ಪ ಹಾಕಿ ಕಾದ ನಂತರ ಬೆಳುಳ್ಳಿ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಕರಿದಾದ ಮೇಲೆ ಅನ್ನ ಹಾಕಿ ಬೆರೆಸಿ. ಮಾಡಿಟ್ಟುಕೊಂಡ ಪುಡಿ, ಉಪ್ಪು, ನಿಂಬೆರಸ ಹಾಕಿ ಎಲ್ಲವೂ ಸರಿಯಾಗಿ ಬೆರೆತುಕೊಳ್ಳುವಂತೆ ಮಿಕ್ಸ್ ಮಾಡಿದರೆ ರುಚಿಯಾದ ಕರಿಬೇವು ಅನ್ನ ರೆಡಿ.