ಕರಿಬಸವೇಶ್ವರ ವಿಜಯ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವ

ಕಲಬುರಗಿ,ಫೆ.20-ನಗರ ಹೊರವಲಯದ ಕೊರಕೊಳ್ಳಗುಡ ನಂದೂರ (ಕೆ) ಕ್ಷೇತ್ರದಲ್ಲಿ ಗುರು ಕರಿಬಸವೇಶ್ವರ 6ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗುರು ಕರಿಬಸವೇಶ್ವರ ವಿಜಯ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವ ದಿವ್ಯ ಸಾನ್ನಿಧ್ಯ ವಹಿಸಿದ್ದ ಮುಗುಳನಾಗಾವಿಯ ಸಂಸ್ಥಾನ ಕಟ್ಟಿಮನಿ ಹಿರೇಮಠ ಶ್ರೀಗಳು ಮಾತನಾಡಿ, ಭಾರತ ದೇಶದ ಸಂಸ್ಕøತಿ ಸಂಸ್ಕಾರ ಪ್ರತಿಯೊಂದು ಆಚರಣೆಗಳು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿವೆ. ಅದರಲ್ಲೂ ಈ ದೇಶಕ್ಕೆ ಸಂತರ ಶರಣರ ಶಿವಯೋಗಿಗಳ ನೀಡಿದ ಆಧ್ಯಾತ್ಮಿಕ ಕೊಡುಗೆ ಅಪಾರವಾದುದ್ದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ನರರೋಗ ವೈದ್ಯ ಡಾ.ಅನೀಲಕುಮಾರ ಪಾಟೀಲ ಮಾತನಾಡಿ, ಜಾತ್ರೆ ಪುರಾಣ ಪ್ರವಚನ ಇವುಗಳು ಬಹಳ ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಬಹಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಜಾತ್ರೆಯ ವಿಶೇಷತೆ ಎಂದರೆ ಧರ್ಮ ಮತ ಪಂಥ ಅವುಗಳನ್ನೆಲ್ಲ ದೂರ ಇರಿಸಿ ಗ್ರಾಮಸ್ಥರೆಲ್ಲರೂ ಒಂದಾಗಿ ಚೆಂದಾಗಿ ಆಚರಿಸುವ ಒಂದು ಅಮೂಲ್ಯವಾದ ಪರಂಪರೆ ಎಂದರು.
ಇದೇ ಸಂದರ್ಭದಲ್ಲಿ ಪ್ರವಚನಕಾರರಾದ ಬಂಡಯ್ಯ ಶಾಸ್ತ್ರಿಗಳು ಸುಂಟನೂರ, ರೇವಣಸಿದ್ದಯ್ಯ ಸ್ವಾಮಿ ಹುಳಗೇರಾ, ನಂದೂರ ಕೆ ಗ್ರಾ.ಪಂ.ಅಧ್ಯಕ್ಷೆ ಸರೂಬಾಯಿ ಪಾಣೆಗಾವ ಗ್ರಾ.ಪಂ. ಉಪಾಧ್ಯಕ್ಷೆ ಮಹಾನಂದ ದೊಡ್ಡಮನಿ, ಗ್ರಾ.ಪಂ. ಸದಸ್ಯರಾದ ರಮಾದೇವಿ ಕಲ್ಲಾ, ಧರ್ಮಮಾಪುರ, ಕೆಸರಟಗಿ, ಪಾಳ, ದೇವನ ತೆಗನೂರ , ಗ್ರಾಮಗಳಿಂದ ಅನೇಕ ಭಕ್ತರು ಆಗಮಿಸಿದ್ದರು. ಸಂಗಮೇಶ ನೀಲಾ ಸಂಗೀತಕ್ಕೆ ಬಸವರಾಜ ಚಲಗೇರಿ ತಬಲಾ ಸಾಥ್ ನೀಡಿದರು. ಕರಿಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಸಮಸ್ತ ಸದ್ಭಕ್ತ ಮಂಡಳಿ ನಂದೂರ (ಕೆ) ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.