ಕರಾಸನೌಕರರ ಸಂಘಕ್ಕೆ ರಾಜ್ಯಧ್ಯಕ್ಷ ರಿಂದ ಕಳಂಕ ಆರೋಪ

ರಾಯಚೂರು.ನ.22.ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿಯವರು ವ್ಯತಿರಿಕ್ತವಾಗಿ 31 ಜನರ ವರ್ಗಾವಣೆ ಕೂಟದ ಪ್ರಥಮ ವ್ಯಕ್ತಿ ಎನಿಸಿಕೊಂಡು ಸಂಘದ ಕಛೇರಿ ಮತ್ತು ರಾಜ್ಯಧ್ಯಕ್ಷರ ಹುದ್ದೆಗೆ ಕಳಂಕ ತಂದಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮೆಹಬೂಬ ಪಾಷಾ ಎಂ ಅವರು ಆರೋಪಿಸಿದರು.
ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ, ರಾಜ್ಯದ 5.40 ಲಕ್ಷ ಸರ್ಕಾರಿ ನೌಕರ ಕಲ್ಯಾಣ ಆಶಕಿರಣ ಆಗಿದ್ದ ಸಂಘವನ್ನು ಖಾಸಗಿ ಕಾರ್ಪೊರೇಟ್ ಆಗಿ ಮಾರ್ಪಡಿಸಲಾಗುತ್ತಿದೆ ,ಸಂಘ ಇದುವರೆಗೂ ಪಾಲಿಸುತ್ತಾ ಬಂದ ರಾಜಕೀಯ ತಟಸ್ಥ ನೀತಿಯ ಬಗ್ಗೆ ರಾಜ್ಯದ ನೌಕರರಲ್ಲಿ ಅನುಮಾನ ಶಂಕೆ ಮೂಡುತ್ತಿದೆ.
ರಾಜ್ಯಧ್ಯಕ್ಷ ಸಿಎಸ್ ಶಡಕ್ಷರಿ ಅವರು ತಮ್ಮ ವೈಯಕ್ತಿಕ ಹಿತದೃಷ್ಟಿಯಿಂದ ಸಂಘದಲ್ಲಿ ಭಿನ್ನಮತ ಉಂಟಾಗಿದೆ ಇತ್ತೀಚಿಗೆ ಮೈಸೂರಿನ ಸುದ್ದಿಗೋಷ್ಠಿಯೊಂದರಲ್ಲಿ ವ್ಯತಿರಿಕ್ತವಾಗಿ 31 ಜನರ ವರ್ಗಾವಣೆ ಪುಟದ ಪ್ರಥಮ ವ್ಯಕ್ತಿಯನ್ನು ಸಿಕೊಂಡು ಸಂಘದ ಕಚೇರಿ ಮತ್ತು ರಾಜ್ಯ ಅಧ್ಯಕ್ಷರ ಹುದ್ದೆಗೆ ಕಳಂಕ ತಂದಿದ್ದಾರೆ.
ಇವರು ನಿಯಮಗಳನ್ನು ಮೀರಿ ಸರ್ವಾಧಿಕಾರಿ ದೋರಣೆವಾನುಸರಿಸಿದಗದಾರೆ.ನಮ್ಮ ಸಂಘದ ನಿಯಮ ಉಲ್ಲಂಘನೆ ಮಾಡಲಾಗಿದೆ,೬ ನೇ ವೇತನ ಆಯೋಗ ಹಿಂದಿನ ಸರ್ಕಾರ ಸೇವಾ ನಿಯಮ ಸುದಾರಣೆಯಾಗಿಲ್ಲ
ನಮನ್ನು ಗುಲಾಮಗಿರಿಯಂತೆ ಕಾಣುತ್ತಿದ್ದಾರೆ. ಎನ್ ಪಿ ಎಸ್ ಉನ್ನತ ರಚನೆ ಮಾಡಿಸಿ ಜಾರಿಗೆ ತರದಂತೆ ಮಾಡಿದರೆ.
ನಮ್ಮ ಶಿಕ್ಷಕರಿಗೆ ೨ ತಿಂಗಳು ವೇತನ ನೀಡಿಲ್ಲ, ಸಂಘದ
ವತಿಯಿಂದ ಕನಿಷ್ಟ ಆಸರೆ ನೀಡಿಲ್ಲ , ಪ್ರಮಾಣಿಕ ವಾಗಿ ಕೆಲಸ ಮಾಡಿದವರಿಗೆ ತುಟ್ಡಿ ಬತ್ಯ ತಡೆಯುವುದು ಎಲ್ಟಿಸಿ ನಿಲ್ಲಿಸಲಾಗಿಲ್ಲ,ಕೋವಿಡ್ ನಿಂದ ಅಲವರು ಸಂಕಷ್ಟ ಅನುಭವಿಸುತ್ತಾರೆ. ಈ ಹಿಂದಿನ ನಾಯಕತ್ವ ಪರ ಸಂಘವಿಲ್ಲ, ಹೋರಾಟ ಸತ್ಯಾಗ್ರಹ ಮಾಡಿಲ್ಲ,
ಯಾವುದೇ ಸಬೆಯಲ್ಲಿ ಚರ್ಚೆ ನಡೆಸಿಲ್ಲ, ಹಸ್ತಕ್ಷೇಪ ಮಾಡುತ್ತಿದೆ‌. ರಾಜ್ಯಾದ್ಯಕ್ಷರು ಮತ್ತೊಂದು ಸಂಘಟನೆಯ ಬಗ್ಗೆ ಹಸ್ತಕ್ಷೇಪ ಮಾಡಬಾರದು, ಮತ್ತೊಂದು ಸಂಘ ವನ್ನು ಹುಟ್ಟು ಹಾಕುವಂತೆ ಮಾಡಬಾರದು.ಸ್ವಾತಂತ್ರ್ಯ ಕಾರ್ಯ ನಿರ್ವಹಣೆ ಮಾಡಬರದು ಇವರಿಗೆ ಕರಾಸನೌಕರರ ಸಂಘ ತೀರ ವೈಯಕ್ತಿಕವಾಗಿದೆ ಎಂದು ಆರೋಪಿಸಿದರು.
ಸಂಘದ ತಾಲ್ಲೂಕು ಜಿಲ್ಲಾ ಸಮಿತಿ ಬಗ್ಗೆ ಸಭೆಗಳನ್ನು ನಡೆಸಲು ಆಯಾ ಸಮಿತಿ ಯ ಜಿಲ್ಲಾದ್ಯಕ್ಷರೆ ಮಾಡಬೇಕು ಆದರೆ ಎಲ್ಲವೂ ಒಬ್ಬರೇ ನಿರ್ವಹಣೆ ಮಾಡುತ್ತಿದ್ದಾರೆ.
ಕನಿಷ್ಠ ತಿಳುವಳಿಕೆಯು ಇಲ್ಲದಂತಾಗಿದೆ. ಮುಂದೆ ಜಿಲ್ಲೆಗೆ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಾರೆ. ಈ ಪ್ರಚಾರದಲ್ಲಿ ನಮ್ಮ ಶಿಕ್ಷಕರು ಈ ಚುನಾವಣೆಯಲ್ಲಿ ಯಾರೂ ಬಾಗವಹಿಸಬಾರದು, ರಾಜ್ಯಾದ್ಯಕ್ಷ ಆದಾ ನಂತರ ವರ್ಗಾವಣೆಯಲ್ಲಿ ಇವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ಘನತೆಗೆ ಕುತ್ತು ತರುತ್ತಿದ್ದಾರೆ. ನಾವು ಹೆಚ್.ಕೆ ಬಣದಿಂದ ನಾವು ಕೆಲಸ ಮಾಡಿರುವುದರಿಂದ ನಮ್ಮನ್ನು ಆರೋಪಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್. ಲಕ್ಷ್ಮಣ,ಮಂಜುನಾಥ,ನರಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.