ಕರಾವಳಿಯವರಿಗೆ ಬಸವಣ್ಣನವರ ಕಾಯಕ ಸಂಸ್ಕೃತಿ ಗುಣ

ಕಲಬುರಗಿ,ಸೆ.20 ಕರಾವಳಿಯವರು “ಕಾಯಕವೇ ಕೈಲಾಸ” ವೆಂದು ಬಸವಣ್ಣನವರ ಕಾಯಕ ಸಂಸ್ಕೃತಿಯನ್ನು ನಂಬಿ ಜಗತ್ತಿನಾದ್ಯಂತ ಜೀವನ ರೂಪಿಸಿ ಕೀರ್ತಿಯನ್ನು ಗಳಿಸಿದವರು ಎಂದು ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹೇಳಿದರು
ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘದ 58ನೇ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಕಲ್ಬುರ್ಗಿಯ ಸಾರ್ವಜನಿಕ ಉದ್ಯಾನವನದ ಶ್ರೀ ಯಾತ್ರಿಕ್ ನಿವಾಸ ಸಭಾಂಗಣದಲ್ಲಿ ದಲ್ಲಿ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮವನ್ನು ಸೆ. 19ರಂದು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಕರಾವಳಿಯ ಜನರು ಕಠಿಣ ದುಡಿಮೆ ಪ್ರಮಾಣಿಕತೆ ಮತ್ತು ದೂರಗಾಮಿ ಚಿಂತನೆಯೊಂದಿಗೆ ಕಾಯಕವನ್ನು ಶ್ರದ್ಧೆಯಿಂದ ನಡೆಸಿ ಕಲ್ಯಾಣ ಕರ್ನಾಟಕ ಭಾಗದ ಹೋಟೆಲ್ ಉದ್ಯಮ ರಂಗ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ ಮಾತ್ರವಲ್ಲದೆ ಈ ಭಾಗದ ಜನರಿಗೆ ತಮ್ಮ ಉದ್ಯಮ ಸಂಸ್ಥೆಗಳಲ್ಲಿ ಉದ್ಯೋಗವನ್ನು ನೀಡಿ ಉದ್ಯೋಗದಾತರಾಗಿದ್ದಾರೆ. ಸಮಾಜ ಸೇವಾ ಕಾರ್ಯಗಳ ಮೂಲಕ ಈ ಭಾಗದ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿ ಇಂದು ದೊಡ್ಡ ಶಕ್ತಿಯಾಗಿ ಕೆಲಸ ಮಾಡ್ತಾ ಇದ್ದಾರೆ ರಕ್ತದಾನ ಅನ್ನಬ್ರಹ್ಮ ಯೋಜನೆ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಾಂಸ್ಕೃತಿಕವಾಗಿ ಅನೇಕರನ್ನು ಬೆಳೆಸುವ ಮೂಲಕ ಸಂಘವು ಉತ್ತಮ ಕಾರ್ಯ ನಡೆಸುತ್ತಿದೆ ಎಂದರು.

5 ಲಕ್ಷ ರೂಪಾಯಿ ಘೋಷಣೆ

                  ದಕ್ಷಿಣ ಕನ್ನಡ ಸಂಘವು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ರಾದ ಜಾಗದಲ್ಲಿ ನಿರ್ಮಾಣ ಮಾಡಲಿರುವ ಕರಾವಳಿ ಸಾಂಸ್ಕೃತಿಕ ಭವನಕ್ಕೆ ಶಾಸಕರ ನಿಧಿಯಿಂದ ಈ ವರ್ಷ 5 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಹೇಳಿದರು.ಯಾವುದೇ ರಾಜಕೀಯ ಪಕ್ಷಗಳ ಬೇದ ಭಾವವಿಲ್ಲದೆ.ಎಲ್ಲ ಶಾಸಕರ ನಿಧಿಯಿಂದ ಹಾಗೂ ಸಭಾಸದಸ್ಯರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನಿಧಿಯಿಂದ ಅನುದಾನ ಪಡೆದು ಮುಂದಿನ ವರ್ಷ ಸ್ವಂತ ನಿವೇಶನದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಸುವಂತಾಗಗಲಿ ಎಂದು ಶುಭ ಹಾರೈಸಿದರು.

ದಕ್ಷತೆ ಎಂದರೆ ದಕ್ಷಿಣ ಕನ್ನಡ

                ದಕ್ಷಿಣ ಕನ್ನಡ ಸಂಘದ ಸದಸ್ಯರು ದಕ್ಷತೆ ಮತ್ತು ಬದ್ಧತೆಗೆ ಪಡೆದವರು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ. ಅವಿನಾಶ್ ಜಾಧವ್ ಹೇಳಿದರು. ಕರಾವಳಿಯ ಜನ ಬಹಳ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಜನಜೀವನ ನಡೆಸುತ್ತಿದ್ದು ವ್ಯವಹಾರದಲ್ಲಿ ಉತ್ತುಂಗ ಕೇರಿದ್ದಾರೆ ಅದು ನಮಗೆಲ್ಲ ಮಾದರಿಯಾಗಬೇಕಾಗಿದೆ ಕಲಬುರ್ಗಿಯ ದಕ್ಷಿಣ ಕನ್ನಡ ಸಂಘ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಹೆಮ್ಮೆಯ ಸಂಘವಾಗಿ ಬೆಳೆದಿದೆ ಈ ಸಂಘಕ್ಕೆ                ನಿರ್ಮಾಣ ಮಾಡುವ ಸಾಂಸ್ಕೃತಿಕ ಭವನಕ್ಕೆ ಲೋಕಸಭಾ ಸದಸ್ಯರ ನಿಧಿಯಿಂದ ಅನುದಾನ ಮಂಜೂರು ಮಾಡಲು ಪ್ರಯತ್ನಿಸುವುದಾಗಿ ಹೇಳಿದರು. ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ತನ್ನ ಸ್ವಂತ ನಿವೇಶನದಲ್ಲಿ ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಸಾಂಸ್ಕೃತಿಕ ಸಮುಚ್ಚಯ "ಕರಾವಳಿ ಭವನ" ವನ್ನು ನಿರ್ಮಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ನೆರವನ್ನು ಪಡೆಯಲಾಗುವುದು ಎಂದು ಹೇಳಿದರು.
                     ಕಾರ್ಯಕ್ರಮವು ಗಣೇಶ ದೇವರ ಮೂರ್ತಿ ಪ್ರತಿಷ್ಠಾಪನೆ ಗಣ ಹೋಮ ನವಗ್ರಹ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ಕಲಬುರ್ಗಿಯ ವಿಘ್ನೇಶ್ವರ ಭಟ್ ಮತ್ತು ಅರ್ಚಕರ ತಂಡ ಧಾರ್ಮಿಕ ವಿಧಿ ವಿಧಾನ ನೆರವೇರಿಸಿತು. ನಂತರ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ಕಲಾವಿದೆ ಶುಭಾಂಗಿ ರಾಜು ತೀರ್ಪುಗಾರರಾಗಿ ಭಾಗವಹಿಸಿದರು. ನಂತರ ಮಡಿಕೆ ಒಡೆಯುವ ಸ್ಪರ್ಧೆ ಸಂಗೀತ ಕುರ್ಚಿ ,ಟವೆಲ್ ಓಟ ,ಭಕ್ತಿ ಗಾಯನ ಸ್ಪರ್ಧೆ ಸ್ಪರ್ಧೆಗಳನ್ನು ಪುರುಷರಿಗೆ , ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿಗಳಾದ ಚಂದ್ರಕಾಂತ್ ವಿ ಗುತ್ತೇದಾರ್ ನ್ಯಾಯವಾದಿ ಸಿ.ಬಿ ಪಾಟೀಲ್ ಓಕಳಿ ಇಂಜಿನಿಯರ್ ಅಶೋಕ್ ಸನ್ನತಿ ಉದ್ಯಮಿಗಳಾದ ರಾಜೇಶ್ ದತ್ತು ಗುತ್ತೇದಾರ್ ಶಂಕರ್ ಬ್ರಹ್ಮಪುರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಮಾಜಿ ನಗರ ಸಭಾ ಸದಸ್ಯ ಭೀಮರಾಯ , ವೆಂಕಟೇಶ ಕೆದಿಲಾಯ, ಪೂರ್ಣಿಮಾ ಆರ್ ಶೆಟ್ಟಿ ಸಚಿನ್ ಪರತಬಾದ್ ,ಬಾಬುರಾವ್ ಯಡ್ರಾಮಿ, ಭವಾನಿಸಿಂಗ್ ಠಾಕೂರ್, ದೇವೇಂದ್ರಪ್ಪ ಅವಂಟಿ, ಗೋವಿಂದ ಭಟ್, ಲತಾ ಚಂದ್ರಕಾಂತ್ ಗುತ್ತೇದಾರ್ ಸವಿತ ಗುತ್ತೇದಾರ್ , ಪ್ರಮೀಳಾ ಪೆರ್ಲ ಡಾ. ರಕ್ಷಾ ಶೆಟ್ಟಿ, ಲತಾ ಆಚಾರ್ಯ. ದತ್ತ ಆರ್ ಚಂದನ್ ಸತ್ಯನಾಥ ಶೆಟ್ಟಿ, ಗಂಗಾಧರ ತಂತ್ರಿ ,ಪ್ರಶಾಂತ ಶೆಟ್ಟಿ , ಪುರಂದರ ಭಟ್ ನರಸಿಂಹ ಮೆಂಡನ್, ದಯಾನಂದ ಪೂಜಾರಿ, ಶ್ರವಣಾ ಪಿ ಭಟ್, ಅರುಣಾಚಲ್ ಭಟ್ ರಮಾನಂದ ಭಂಡಾರಿ, ರೋಹಿಣಾಕ್ಷ  ಶಿರ್ಲಾಲು, ಜೀವನ್  ಕುಮಾರ್ ಜತ್ತನ್,ಶಿವರಾಜ್ ಕೋಟ್ಯಾನ್,ರೇಣುಕಾ ಶ್ರೀಕಾಂತ್ ಶಿರ್ಲಾಲು, ಗಿರಿಧರ ಭಟ್ ,ಸುನಿಲ್ ಶೆಟ್ಟಿ,ಸತ್ಯಾನಂದ ಮೂಡಬಿದ್ರಿ, ಮಿಲಿತ್ ಹೆಗ್ಡೆ,ಪ್ರವೀಣ್ ಜತ್ತನ್, ವಿದ್ಯಾಧರ ಭಟ್, ಜಯಂತ್ ಪೂಜಾರಿ, ಶ್ರೀಧರ್ ಭಟ್ ಮತ್ತಿತರರು ಇದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಸಲಾಯಿತು.