ಕರಾರಸಾ ನಿಗಮ ಚಿತ್ರದುರ್ಗ ಘಟಕದಲ್ಲಿ ರಾಜ್ಯೋತ್ಸವ


ಚಿತ್ರದುರ್ಗ.ನ.೨; ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮತ್ತು ನೌಕರರು ವಿಶೇಷವಾಗಿ ನಾಡು, ನುಡಿ, ಸಂಸ್ಕೃತಿ ಬಗ್ಗೆ ಪ್ರಯಾಣಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಅಭಿಮಾನ ಮೂಡಿಸುವಂತಹ ಕೆಲಸ ಮಾಡುತ್ತಿದ್ದು, ಕೋವಿಡ್ ಇರುವ ಕಾರಣ ಸರಳವಾಗಿ ಘಟಕದ ಆವರಣದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಹೊನ್ನಪ್ಪರವರು ಪಾರುಪತ್ತೆದಾರರಾದ ಸಿದ್ದೇಶ್‌ರವರು ಮತ್ತು ಸಂಚಾರಿ ನಿರೀಕ್ಷಕರಾದ ಲಿಂಗರಾಜು ರವರು ವಿಭಾಗದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾದ ನಟರಾಜ್.ಎಸ್ ರವರು ಮತ್ತು ಶಿವಕುಮಾರ್, ಬಸವರಾಜ್, ನಾಗರಾಜ್, ಗಂಗಾಧರ್, ನೇತ್ರಾವತಿ, ಮಹಂತೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದು, ಪುಷ್ಪಾರ್ಚನೆ ಮೂಲಕ ಸಿಹಿ ಹಂಚಲಾಯಿತು.