ಕರಾಟೆ ಹಬ್ ಆಗಿ ಶಿವಮೊಗ್ಗ: ಹೆಚ್ ಸಿ ಯೋಗೇಶ್

ಸಂಜೆವಾಣಿ ವಾರ್ತೆ

ಶಿವಮೊಗ್ಗ. ಜ.೩೧;ಶಿವಮೊಗ್ಗದಲ್ಲಿ ಕರಾಟೆ ಪಂದ್ಯಾವಳಿಗಳು ಹೆಚ್ಚು ಆಯೋಜನೆಗೊಳ್ಳುತ್ತಿದು ಸರ್ಕಾರಿ ಹಾಗೂ ಓಪನ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು  ರಾಜ್ಯದ ವಿವಿಧ ಕಡೆಯಿಂದ ಹೆಚ್ಚು ಕ್ರೀಡಾಪಟುಗಳು ಶಿವಮೊಗ್ಗಕ್ಕೆ ಬರುತ್ತಿದ್ದು ಇದರಿಂದ ಶಿವಮೊಗ್ಗ ಕರಾಟೆ ಹಬ್ ಆಗಿ ಪರಿವರ್ತನೆ ಆಗಿದೆ ಎಂದು ಹೆಚ್ ಸಿ ಯೋಗೇಶ್ಜ. ಜನವರಿ 28ರಂದು ಶಿವಮೊಗ್ಗ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಆಯೋಜಿಸಿದ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಕರಾಟೆ ಪಂದ್ಯಾವಳಿ ಉದ್ಘಾಟನೆ ನಂತರ ಮಾತನಾಡಿದರು ಕಾರ್ಯಕ್ರಮದಲ್ಲಿಬಿಜೆಪಿ ಜಿಲ್ಲಾ ಕಾರ್ಯದರ್ಶಿಶ್ರೀಮತಿ ಸುಮಾ ಭೂಪಾಳo ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ್ ಮಾಜಿ ಸೂಡ ಸದಸ್ಯ ದೇವರಾಜ್ ನಾಯಕ್  ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಅರಳಪ್ಪ ಶ್ರೀಮತಿ ವೀಣಾ ಮತ್ತು ಆಯೋಜಕರಾದ ಅನೂಪ್ ಶ್ರೇಯಸ್ ವೆಂಕಟೇಶ್ ಹರ್ಷಿತ್ ಸಾಗರ್ ಸೇರಿದಂತೆ ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮುಕೀಬ್ ಅಹ್ಮದ್ ಪ್ರಧಾನ ಕಾರ್ಯದರ್ಶಿ ಸಚಿನ್ ಖಜಾಂಚಿ ಮೀನಾಕ್ಷಿ ಪದಾಧಿಕಾರಿಗಳಾದ ಬಾಲ್ರಾಜ ಪಂಚಪ್ಪ ಲಕ್ಷ್ಮಣ್ ಆಚಾರ್, ಹರೀಶ್ ನರಸಿಂಹಸ್ವಾಮಿ ಜಸ್ಟಿನ್ ಬಸವರಾಜ್ ಸಾಧಿಕ್ ಇಂಚನ ರಮೇಶ್ ಕೃಷ್ಣಮೂರ್ತಿ ಉಪಸ್ಥಿತರಿದ್ದರುಪಂದ್ಯಾವಳಿಯಲ್ಲಿಜಿಲ್ಲೆಯ 5 ತಾಲೂಕುಗಳಿಂದ  200 ಕ್ರೀಡಾಪಟುಗಳು ಭಾಗವಹಿಸಿದ್ದು ಕಟಾ ಮತ್ತು ಕುಮಟಿ ವಿಭಾಗಗಳಲ್ಲಿ ಬಹುಮಾನ ಪಡೆದರು ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಿಸ್ಟರ್ ಶಿವಮೊಗ್ಗ ಮಿಸ್ ಶಿವಮೊಗ್ಗ ಎಂಬ ಸ್ಪರ್ಧೆ ಆಯೋಜಿಸಲಾಗಿತ್ತು ಅದರಲ್ಲಿ ದುರ್ಗಾ ದರ್ಶನ ಮಿಸ್ಟರ್ ಶಿವಮೊಗ್ಗ ಆಗಿ ಇಂಚನ ಮಿಸ್ ಶಿವಮೊಗ್ಗ ಅವಾರ್ಡ್ ಪಡೆದರು