ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ಚಿನ್ನದ ಪದಕ

ದಾವಣಗೆರೆ. ಮೇ.೧೪; ಇತ್ತೀಚೆಗೆ ಮೈಸೂರಿನಲ್ಲಿ  ಶೋಭುಕಾಯ್ ಶಿಟೋ ರಿಯೋ ಕರಾಟೆ ಫೆಡರೇಷನ್  ಇಂಡಿಯ, ಕರ್ನಾಟಕ ಹಾಗೂ ವಿ.ಎನ್.ಯೋದ್ಧ ಮಾರ್ಷಲ್  ಆರ್ಟ್ಸ್ ಅಕಾಡಮಿ ವತಿಯಿಂದ ಆಯೋಜಿಸಿದ್ದ  2ನೇ  ರಾಜ್ಯಮಟ್ಟದ ಮುಕ್ತ ಕರಾಟೆ  ಚಾಂಪಿಯನ್ ಶಿಪ್ 2022  ಸ್ಪರ್ಧೆಯ 9 ವರ್ಷ ಮೇಲ್ಪಟ್ಟ ವಿಭಾಗದಲ್ಲಿ  ನಗರದ ನಿಧಿ ಬೇತೂರು  ಸ್ಪರ್ಧಿಸಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ  ಚಿನ್ನದ ಪದಕ ಪಡೆದಿದ್ದಾಳೆ.