ಕರಾಟೆ ಸ್ಪರ್ಧೆಯಲ್ಲಿ ವಿಜೇತ

ವಿಜಯಪುರ, ಡಿ.6-ಕಳೆದ 27, 28 ನವೆಂಬರ್ 2021 ರಂದು ಹುಬ್ಬಳ್ಳಿಯಲ್ಲಿ ನಡೆದ 3ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಯುತ್ ಮಾರ್ಶಲ್ ಆಟ್ರ್ಸ್ (ಆರ್) ಭಾರತೀಯ ಜೈ ಭೀಮ್ ದಳ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗದಲ್ಲಿ ಕಲರ್ ಬೆಲ್ಟ ಮತ್ತು ಬ್ಲ್ಯಾಕ್ ಬೆಲ್ಟ ವಿಭಾಗದಲ್ಲಿ ಭಾಗವಹಿಸಿ ಕಲರ್ ಬೆಲ್ಟ್‍ನಲ್ಲಿ ವಿಜೇತರಾಗಿದ್ದಾರೆ.
ವಿಜೇತರಾದ ಕಾರ್ತಿಕ ನಿಂಬಾಳ ಕಥಾ ಮತ್ತು ಕುಮಟೆ ಎರಡರಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದ ಚೇತನ ಪಾಟೀಲ ಕಥಾ ಪ್ರಥಮ ಸ್ಥಾನ ಮತ್ತು ಕುಮಟೆ ತೃತೀಯ ಸ್ಥಾನ. ಸಂದೀಪ ಜುಮನಾಳ ಕಥಾ ತೃತೀಯ ಸ್ಥಾನ ಮತ್ತು ಕುಮಟೆ ತೃತೀಯ ಸ್ಥಾನ, ರಾಹುಲ ಮನಗೂಳಿ ಕಥಾ ತೃತೀಯ ಸ್ಥಾನ, ಅನುಪ ದಾರಪಾಳ ಕಥಾ ದ್ವಿತೀಯ ಸ್ಥಾನ ಮತ್ತು ಕುಮಟೆ ತೃತೀಯ ಸ್ಥಾನ, ಗ್ರ್ಯಾಂಡ್ ಓಪನ್ ಚ್ಯಾಂಪಿಯನ್ ಶಿಪ್‍ನಲ್ಲಿ ತೃತೀಯ ಸ್ಥಾನ ಪಡೆದ ಆಸೀಫ್ ಮುಜಾವರ ಕಥಾ ತೃತೀಯ ಸ್ಥಾನ ಮತ್ತು ಕುಮಟೆ ದ್ವಿತೀಯ ಸ್ಥಾನ, ಕೈಫಿಆಜ್ಮಿ ದೊಡ್ಡಮನಿ ಕಥಾ ತೃತೀಯ ಸ್ಥಾನ ಕುಮಟೆ ತೃತೀಯ ಸ್ಥಾನ. ಕರಾಟೆ ವಿದ್ಯಾರ್ಥಿಗಳು ಪಡೆದುಕೊಂಡದ್ದು ವಿಜಯಪುರ ಜಿಲ್ಲೆಗೆ ರಾಜ್ಯಕ್ಕೆ ಮತ್ತು ಕರಾಟೆ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆಂದು ವಿಜಯಪುರ ಯುತ್ ಮಾರ್ಶಲ್ ಆಟ್ರ್ಸ್ ಕರಾಟೆ ಸಂಸ್ಥೆ ಕಾರ್ಯದರ್ಶಿ ಮತ್ತು ಕರಾಟೆ ತರಬೇತಿದಾರರಾದ ಪ್ರೇಮನಂದ ನಾಗರೇಶಿ ಮತ್ತು ನಗರದ ವಕೀಲರಾದ ನಾಗರಾಜ ಲಂಬು, ಪಾಲಕರಾದ ಪ್ರಕಾಶ ದಾರಪಾಳ, ಅನೀಲ ನಿಂಬಾಳ, ಕರಾಟೆ ಶಿಕ್ಷಕರಾದ ಮಾಸ್ಟರ್ ಅನೀಲಕುಮಾರ, ಭಾರತಿ ಜೈನಾಪುರ, ಅಕ್ಷರಕುಮಾರ ಗರೀಬ, ಹೈದರಅಲಿ ಮುಳ್ಳಾಳ, ರಾಮಚಂದ್ರ ಸೂರ್ಯವಂಶಿ, ಮಹಮ್ಮದಗೌಸ ಬೇಪಾರಿ ಇವರೆಲ್ಲರ ಕಡೆಯಿಂದ ಕರಾಟೆ ಕ್ರೀಡಾಪಟುಗಳಿಗೆ ಹೃದಯಪೂರ್ವವಾಗಿ ಅಭಿನಂದಿಸಿದರು.