ಕರಾಟೆ ಸ್ಪರ್ಧೆಯಲ್ಲಿ ನಿಧಿ ಬೇತೂರ್ ಗೆ  ಚಿನ್ನ – ಕಂಚು

ದಾವಣಗೆರೆ.ಏ.೧೬;  ಕುಂದಾಪುರದಲ್ಲಿ ಆಯೋಜಿಸಿದ್ದ‌ ರಾಷ್ಟ್ರಮಟ್ಟದ ಕೋಸ್ಟಲ್ ಓಪನ್ ಕರಾಟೆ  ಚಾಂಪಿಯನ್ ಶಿಪ್ -2023 ಸ್ಪರ್ಧೆಯ 9 ವರ್ಷ ಮೇಲ್ಪಟ್ಟ ವಿಭಾಗದಲ್ಲಿ   ನಗರದ ನಿಧಿ ಬೇತೂರು  ಸ್ಪರ್ಧಿಸಿ ಕಟಾ ವಿಭಾಗದಲ್ಲಿ ಚಿನ್ನ ಹಾಗೂ ಕುಮಿಟೆ ವಿಭಾಗಗಳಲ್ಲಿ ಕಂಚಿನ ಪದಕ ಪಡೆದಿದ್ದಾಳೆ.ಕೆ.ಪಿ.ಜೋಸ್ ಅವರಿಂದ ತರಬೇತಿ ಪಡೆದಿರುವ  ನಿಧಿ ನಗರದ ಅಭಿಷೇಕ್ ಬೇತೂರು ಹಾಗೂ ಶ್ರೀಮತಿ ಶ್ವೇತಾ ದಂಪತಿಗಳ ಪುತ್ರಿ.