ಕರಾಟೆ ಸ್ಪರ್ಧೆಯಲ್ಲಿ ನಿಧಿಗೆ ಪ್ರಶಸ್ತಿ

ದಾವಣಗೆರೆ.ಜ.೨೩; ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ‌ 1ನೇ ಅಂತರರಾಷ್ಟ್ರೀಯ ಮಟ್ಟದ ಓಪನ್ ಚಾಂಪಿಯನ್ ಶಿಪ್  ಕರಾಟೆ    ಸ್ಪರ್ಧೆಯ 9 ವರ್ಷ ಮೇಲ್ಪಟ್ಟ ವಿಭಾಗದಲ್ಲಿ   ನಗರದ ನಿಧಿ ಬೇತೂರು  ಸ್ಪರ್ಧಿಸಿ ಕಟಾ ವಿಭಾಗದಲ್ಲಿ ಚಿನ್ನ ಹಾಗೂ ಕುಮಿಟೆ ವಿಭಾಗದಲ್ಲಿ  ಕಂಚಿನ ಪದಕ ಪಡೆದಿದ್ದಾಳೆ.ಸ್ಪರ್ಧೆಯಲ್ಲಿ ಭಾರತ, ದುಬೈ, ಮಲೇಷಿಯಾ, ಶ್ರೀಲಂಕಾ, ಬಾಂಗ್ಲಾದೇಶದ ಕರಾಟೆ ಪಟುಗಳು ಭಾಗವಹಿಸಿದ್ದರು.ನಿಧಿಕೆ.ಪಿ.ಜೋಸ್ ಅವರಿಂದ ತರಬೇತಿ ಪಡೆದಿದ್ದಾರೆ.