ಕರಾಟೆ ಸಂಸ್ಥೆಯ ವಿಜಯನಗರ ಜಿಲ್ಲಾಧ್ಯಕ್ಷರನ್ನಾಗಿ ಗೌಳೇರ ನಾಗರಾಜ್ ಆಯ್ಕೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ8: ಫುನಾಕೋಷಿ ಶೋಟೊಕನ್ ಕರಾಟೆ ರಾಜ್ಯ ಸಂಸ್ಥೆಯಿಂದ ಬಳ್ಳಾರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರನ್ನಾಗಿ ಮರಿಯಮ್ಮನಹಳ್ಳಿಯ ಕರಾಟೆ ಶಿಕ್ಷಕ ಗೌಳೇರ ನಾಗರಾಜ್ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ಡಿ.ಸುರೇಶ ತಿಳಿಸಿದ್ದಾರೆ.
ವೆಂಕಟೇಶ (ಗೌರವಾಧ್ಯಕ್ಷ), ಸಲ್ಮಾನ್ ಮತ್ತು ಆನಂದ(ಉಪಾಧ್ಯಕ್ಷ), ಗುಜ್ಜಲ್ ನಾಗರಾಜ್ ನರಸಾಪುರ (ಪ್ರಧಾನ ಕಾರ್ಯದರ್ಶಿ), ಬಸವನದುರ್ಗದ ಗುಜ್ಜಲ್ ಈರೇಶ (ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಕಾರ್ಯದರ್ಶಿ ಕೆ.ರವಿಕುಮಾರ್, ಸಂಸ್ಥೆಯ ಸುನಿಲ್ ಗವಾಸ್ಕರ್, ಜಿಲ್ಲೆಯ ವಿವಿಧ ಭಾಗದ ಕರಾಟೆ ಶಿಕ್ಷಕರಾದ ಕಾಸಿಂಪೀರ, ಟಿ. ರಾಘವೇಂದ್ರ, ದಾದಾ ಖಲಂದರ್ ವಿವಿಧ ಭಾಗಗಳ  ಶಿಕ್ಷಕರು ಉಪಸ್ಥಿತರಿದ್ದರು.