ಕರಾಟೆ ವಿದ್ಯಾರ್ಥಿಗಳಿಗೆ ಚಾಂಪಿಯನ್ ಶಿಫ್

ಕೋಲಾರ, ಏ.೧೨: ಇಂಡಿಯನ್ ಕೋಶಿಕಿ ಶೀಟೋ ರುಯು ಕರಾಟೆ ವತಿಯಿಂದ ನಗರದ ಪತ್ರಕರ್ತರ ಭವನದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಕೋಲಾರದ ಇಕೋವಾಶಿ ಕರಾಟೆ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ವಿಜೇತರಾಗಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾ ಜ್ಯೋತಿ ಶಾಲೆಯ ಅನನ್ಯ ಕಟ್ಟಾದಲ್ಲಿ ಪ್ರಥಮ ಹಾಗೂ ಕುಮಿತೆ ಯಲ್ಲಿ ದ್ವಿತೀಯ, ಇದೇ ಶಾಲೆಯ ಹಿತೇಶ್ ಕಟ್ಟಾ ಹಾಗೂ ಕುಮಿತೆಯಲ್ಲಿ ಪ್ರಥಮ, ಶುಭಲಾ ಶಾಲೆಯ ಆಕಾಶ್ ಕಟ್ಟಾ ಹಾಗೂ ಕುಮಿತೆಯಲ್ಲಿ ಪ್ರಥಮ, ಗೋಕುಲ್ ಕಟ್ಟಾ ಪ್ರಥಮ ಕುಮಿತೆಯಲ್ಲಿ ದ್ವಿತೀಯ, ಚಿನ್ಮಯ ಶಾಲೆಯ ಸಂಜನಾ ಮತ್ತು ಸಂಜಿತಾ ಕುಮಿತೆಯಲ್ಲಿ ದ್ವಿತೀಯ ಹಾಗೂ ಕಟ್ಟಾದಲ್ಲಿ ದ್ವಿತೀಯ ಹಾಗೂ ಶಿಳ್ಳಂಗಿರಿಯ ಶಶಿಕುಮಾರ ಕುಮಿತೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಉತ್ತಮ ಪ್ರದರ್ಶನ ನೀಡಿ ವಿಜೇತರಾದ ಕರಾಟೆಪಟುಗಳನ್ನು ಕರಾಟೆ ಮುಖ್ಯ ತರಬೇತುದಾರ ಎಲ್ಲಪ್ಪ, ನಾಗರಾಜ್, ದೀಪಕ್ ಹಾಗೂ ತರಬೇತುದಾರರಾದ ಧನುಶ್ ಹಾಗೂ ಹರಿ ಅಭಿನಂದಿಸಿದ್ದಾರೆ.