ಕರಾಟೆ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

ಕೋಲಾರ,ನ.೧೩: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ನಡೆದ ನ್ಯಾಷನಲ್ ಇನ್ವಿಟೇಷನ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ, ಕೋಲಾರ ಜಿಲ್ಲೆಯಿಂದ ಜಪಾನ್ ಶಿಟೋ-ರಿಯೋ ಕರಾಟೆ ಶಾಲೆಯ ಕರಾಟೆ ರಾಮುರವರ ವಿದ್ಯಾರ್ಥಿಗಳಾದ ಮಣಿಕಂಠ ಡಿ, ಕಟ್ಟಾ ಮತ್ತು ಕುಮತೆದಲ್ಲಿ ಚಿನ್ನದ ಪದಕ, ಅಂಜನ್ ಕುಮಾರ್ ಕೆ, ಕಟ್ಟಾದಲ್ಲಿ ಚಿನ್ನದ ಪದಕ ಮತ್ತು ಕುಮತೆದಲ್ಲಿ ಬೆಳ್ಳಿ ಪದಕ, ದುಶ್ಯಂತ್ ಬಿ ಎಂ, ಕುಮತೆದಲ್ಲಿ ಚಿನ್ನದ ಪದಕ ಮತ್ತು ಶ್ರೇಯ ಆರ್ (ಕರಾಟೆ ರಾಮುರವರ ಮಗಳು) ಕಟ್ಟಾದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಶಾಲೆಗೆ ಪ್ರವೇಶ ಪಡೆದು ಎರಡೇ ತಿಂಗಳಲ್ಲಿ ಕಠಿಣ ಶ್ರಮ ಹಾಗೂ ಉತ್ತಮ ತರಬೇತಿ ಪಡೆದು ಚಿನ್ನದ ಪದಕ ಪಡೆದ ಮಣಿಕಂಠ ಹಾಗೂ ಇತರ ವಿದ್ಯಾರ್ಥಿಗಳನ್ನು ತರಬೇತಿದಾರ ಕರಾಟೆ ರಾಮು ರವರು ಶ್ಲಾಘಿಸಿದರು.