ಕರಾಟೆ ಬ್ಲ್ಯಾಕ್‍ಬೆಲ್ಟ್ ಸಾಧಕಿ ವಿಜಯಪುರದ ಕುಮಾರಿ ನಾದೀರಾ ದಾದಾಹಯಾತ ರೋಜಿಂದಾರ

ವಿಜಯಪುರ, ಡಿ.31-ವಿಜಯಪುರ ನಗರದ ಯುತ್ ಮಾರ್ಶಲ್ ಆಟ್ರ್ಸ್ ಅಸೋಸಿಯೆಷನ್‍ನಲ್ಲಿ ತರಬೇತಿ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಸಂಸ್ಥೆ ಕೊಡಮಾಡುವ ‘ಕರಾಟೆ ಬ್ಲ್ಯಾಕ್‍ಬೆಲ್ಟ್’ ತನ್ನದಾಗಿಸಿಕೊಂಡು ಅಮೋಘ ಸಾಧನೆಗೈದ 11 ವರ್ಷದ ಕಿರುಬಾಲೆ ವಿಜಯಪುರದ ಕುಮಾರಿ ನಾದೀರಾ ದಾದಾಹಯಾತ ರೋಜಿಂದಾರ.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಾ ಕರಾಟೆ ಕಲೆಯುವುದನ್ನು ತನ್ನ ಹವ್ಯಾಸ ಮಾಡಿಕೊಂಡು ಆ ದಿಸೆಯಲ್ಲಿ ನಿರಂತರ ಪರಿಶ್ರಮಪಟ್ಟು ತನ್ನ ಗುರಿ ಸಾಧಿಸಿಕೊಂಡಿದ್ದಾಳೆ.
ಪುರುಷ ಪ್ರಧಾನವಾದ ಭಾರತ ದೇಶದಲ್ಲಿ ಹೆಣ್ಣಿನ ಸ್ಥಾನಮಾನಗಳು ಕುಗ್ಗುತ್ತಿರುವ ಇಂದಿನ ದಿನಮಾನಗಳಲ್ಲಿ ಹೆಣ್ಣು ಗಂಡುಸರಿಗಿಂತ ಏನು ಕಮ್ಮಿ ಇಲ್ಲ ಎಂಬ ಮಾತು ಸಾಬಿತು ಪಡೆಸಿ ಅದರ ಜೊತೆಗೆ ಭವಿಷ್ಯದಲ್ಲಿ ಹೆಣ್ಣು ತನ್ನ ಸಂರಕ್ಷಣೆಗೊಸ್ಕರ ತಾನು ಮಾಡಿಕೊಳ್ಳುವ ದಿಸೆಯಲ್ಲಿ ಇಂದಿನ ಹೆಣ್ಣು ಮಕ್ಕಳಿಗೆ ಒಂದು ಹೊಸ ಆಯಾಮ ನೀಡಿ ಆದರ್ಶಪ್ರಾಯವಾಗಿದ್ದಾಳೆ.
ಸಂಸ್ಥೆಯ ಮುಖ್ಯಸ್ಥರಾದ ಪರಮಾನಂದ ನಾಗಋಷಿ ಅವರು ಕರಾಟೆ ಬ್ಲ್ಯಾಕ್‍ಬೆಲ್ಟ್ ನೀಡಿ ಕುಮಾರಿ ನಾದೀರಾ ಬಾಲೆಯ ಸಾಧನೆಯನ್ನು ಮೆಚ್ಚುವಂತದ್ದು ಎಂದು ಪ್ರಶಂಸಿಸಿ ನಮ್ಮ ಸಂಸ್ಥೆ ಪರಿಶ್ರಮಪಟ್ಟಿದ್ದು ಸಾರ್ಥಕವಾಯಿತು ಎಂದು ಬಣ್ಣಿಸಿದ್ದಾರೆ.
ಕುಮಾರಿ ನಾದೀರಾ ಡಿ. ರೋಜಿಂದಾರ ಅವರ ಸೂಫಿ ಮನೆತನದಿಂದ ಬಂದ ತಂದೆ ದಾದಾಹಯಾತ ಬಹುಭಾಷಾ ಕವಿಗಳು ಹಾಗೂ ತಾಯಿ ಶ್ರೀಮತಿ ಹಾಜರಾ ಬೇಗಂ ತನ್ನ ಮಗಳ ಸಾಧನೆ ಮೇಲೆ ಅಭಿಮಾನ ವ್ಯಕ್ತಪಡಿಸಿ ನಮ್ಮ ಮಗಳ ಮುಂದಿನ ಭವಿಷ್ಯದ ಆಸೆ ಆಕಾಂಕ್ಷೆಗಳಿಗೆ ನಾವು ಪೂರಕವಾಗಿ ಪ್ರೇರಕ ಶಕ್ತಿ ತುಂಬಿ ಆಕೆಗೆ ಮುಂದುವರೆಯಲು ಪಣ ತೋರುತ್ತೇವೆ ಎಂದು ಸಂಕಲ್ಪ ಮಾಡಿದ್ದಾರೆ.