ಕರಾಟೆ ತರಬೇತಿಯನ್ನು ರಾಜ್ಯದ ಎಲ್ಲಾ ಶಾಲೆಗಳಿಗೆ ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ವಿಜಯಪುರ, ಡಿ.8-ಕರ್ನಾಟಕ ರಾಜ್ಯದಲ್ಲಿನ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ವಸತಿ ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿಯನ್ನು ಪ್ರಸ್ತುತ 300 ಶಾಲೆಗಳಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ವಿಸ್ತರಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕರಾಟೆ ಡೂ ಸ್ಪೋಟ್ರ್ಸ ಅಸೋಸಿಯೇಶನ ರಾಜ್ಯಾಧ್ಯಕ್ಷರಾದ ಶಿವಕುಮಾರ ಶಾರದಳ್ಳಿ ಮಾತನಾಡಿ ಈ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ವಸತಿ ಶಾಲÁ ಕಾಲೇಜುಗಳ 8 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿಯನ್ನು ಆರಂಭಿಸಿದ್ದು ಬಹಳ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಅದನ್ನು ನಮ್ಮ ಸಂಘದ ವತಿಯಿಂದ ತುಂಬು ಹೃದಯದಿಂದ ಸ್ವಾಗಿತಿಸುತ್ತೇವೆ.
ಸದರಿ ತರಬೇತಿಯನ್ನು ರಾಜ್ಯದ 300 ಶಾಲಾ ಕಾಲೇಜುಗಳಲ್ಲಿ ಆರಂಭಿಸಿರುವುದರಿಂದ ಅವು ಪ್ರತಿ ಜಿಲ್ಲೆಗೆ ಕೇವಲ 9 ರಿಂದ 10 ಶಾಲೆಗಳು ಮಾತ್ರ ಅದರ ವ್ಯಾಪ್ತಿಗೆ ಒಳಪಡುತ್ತದೆ. ಇನ್ನುಳಿದ ಶಾಲೆಗಳ ಹೆಣ್ಣು ಮಕ್ಕಳನ್ನು ಇದರಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಇನ್ನೂ ನೂರಾರು ಶಾಲೆಗಳ ಮಕ್ಕಳಿಗೆ ಈ ತರಬೇತಿಯ ಅವಶ್ಯಕತೆ ಬಹಳವಿದೆ. ಸರಕಾರದ ನಿಯಮದಂತೆ ಆಯಾ ಜಿಲ್ಲೆಗಳಲ್ಲಿ ಲಭ್ಯ ಇರುವ ಸ್ಥಳೀಯ ಕರಾಟೆ ತರಬೇತಿದಾರರನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ ಇಲ್ಲಿ ಒಂದು ವಿಷಯವೇನೆಂದರೆ ಕರ್ನಾಟಕ ರಾಜ್ಯದಲ್ಲಿ ಇರುವ ನಮ್ಮ ಕರಾಟೆ ಸಂಸ್ಥೆಯಲ್ಲಿ ಪ್ರತಿ ಜಿಲ್ಲೆಗೆ 50-80 ಜನರವರೆಗೆ ಕರಾಟೆ ತರಬೇತಿದಾರರು ಲಭ್ಯವಿದ್ದಾರೆ. ಸರಕಾರದ ಈಗಿನ ನಿರ್ಧಾರದಿಂದ ಅದೃಷ್ಟವಂತ ಕರಾಟೆ ತರಬೇತುದಾರರಿಗೆ ಒಂದು ಉತ್ತಮ ಅವಕಾಶ ಮತ್ತು ಅವರ ನಿರುದ್ಯೋಗಕ್ಕೊಂದು ಪರಿಹಾರ ಸಿಕ್ಕಂತೆ ಆಗಿದೆ. ಆದರೆ ರಾಜ್ಯದಲ್ಲಿ ಇನ್ನೂ ನೂರಾರು ಶಾಲೆಗಳ ಮಕ್ಕಳಿಗೆ ಈ ತರಬೇತಿಯ ಅವಶ್ಯಕತೆ ತುಂಬಾ ಇದೆ. ಮತ್ತು ಅದಕ್ಕೆ ಬೇಕಾಗುವಷ್ಟು ಕರಾಟೆ ತರಬೇತಿದಾರರು ನಮ್ಮ ಸಂಸ್ಥೆಗಳ ಅಡಿಯಲ್ಲಿ ಲಭ್ಯವಿದ್ದಾರೆ. ಕಾರಣ ಮಾನ್ಯರು ಈಗಿರುವ ಕೇವಲ 300 ಶಾಲೆಗಳ ಮಿತಿಯನ್ನು ವಿಸ್ತರಿಸಿ ಅದನ್ನು ರಾಜ್ಯದ ಎಲ್ಲಾ ಶಾಲೆಗಳಿಗೂ ವಿಸ್ತರಿಸಬೇಕು ಎಂದು ತಿಳಿಸಿದರು.
ತಾವುಗಳು ತಮ್ಮದೇ ಸರಕಾರದಲ್ಲಿ ಈ ಹಿಂದೆ ಗರಹಸಚಿವರಾಗಿದ್ದಾಗ ಮತ್ತು ಈಗ ಮುಖ್ಯಮಂತ್ರಿಗಳಾದ ನಂತರ ಅನೇಕ ಕಡೆಗಳಲ್ಲಿ ತಮ್ಮ ಸಾರ್ವಜನಿಕ ಸಭೆಗಳಲ್ಲಿ ಮಾರ್ಶಲ್ ಆರ್ಟ ತರಬೇತಿಯನ್ನು ರಾಜ್ಯ ತುಂಬೆಲ್ಲ ವಿಸ್ತಿರಿಸಿ ಎಲ್ಲಾ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿ ನೀಡುವುದಾಗಿ ಹೇಳಿರುತ್ತೀರಿ. ಅದರಂತೆ ಈಗ ನಡೆದುಕೊಂಡಿದ್ದೀರಿ. ಆದರೆ ಅದು ಪ್ರತಿ ಜಿಲ್ಲೆಯಲ್ಲಿ ಕೇವಲ 9 ಅತೌಆ 10 ಶಾಲೆಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಅದರಿಂದಾಗಿ ಕಳೆದ ಹಲವಾರು ವರ್ಷಗಳಿಂದ ಕರಾಟೆ ತರಬೇತಿಯನ್ನು ಪಡೆದುಕೊಂಡು ನಿರುದ್ಯೋಗಿಗಳಾಗಿ ಉದ್ಯೋಗಗಳನ್ನು ಅನ್ವೇಷಣೆ ಮಾಡುತ್ತಿರುವ ಕರಾಟೆ ತರಬೇತಿಪಡೆದ ಯುವಕ ಯುವತಿಯರಿಗೆ ಉದ್ಯೋಗವಿಲ್ಲದಂತಾಗುತ್ತದೆ. ಮತ್ತು ಈ ಸೇವೆಯನ್ನು ನೀಡಲು ಸ್ಪರ್ಧೆಗಳು ಏರ್ಪಟ್ಟು ತರುಣರಲ್ಲಿ ಮನಸ್ಥಾಪಗಳು ಉಂಟಾಗುತ್ತವೆ. ಕಾರಣ ದಯಾಳುಗಳಾದ ತಾವುಗಳು ದಯವಿಟ್ಟು ಅತೀ ಜರೂರಾಗಿ ಈ ತರಬೇತಿಯನು ರಾಜ್ಯದ ಎಲ್ಲಾ ವಸತಿ ಶಾಲಾ ಕಾಲೇಜುಗಳೀಗೆ ವಿಸ್ತರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಜಯಕುಮಾರ ರಾಠೋಡ, ಎಂ.ಎಲ್. ಚೌಧರಿ, ಶಿಫಾಲಿ ರಾಠೋಡ, ಭಾಗ್ಯಶ್ರೀ ಮಂಟೂರ, ನಾಶೀರ ಇಂಡಿಕರ, ಶಬ್ಬಿರ ಯಾದಗಿರಿ, ಶಶಿ ರಾಠೋಡ, ಆಸೀಫ ನಾಟೀಕಾರ, ಈರಣ್ಣ ಸಂಗೊಗಿ, ಗೌರೀಶ ಪಾಟೀಲ, ಅರ್ಪಣ ರಾಠೋಡ, ಶ್ರೀಶೈಲ ನರಳೆ, ಸುಮಾ ತಡವಲಕರ, ಇರ್ಫಾನ ಸೈಯ್ಯದ, ರವಿ ರಾಠೋಡ, ವಿನೋದ ಜಾಧವ, ಮಧು ಗಾಗರೆ, ಸ್ಪೂರ್ತಿ ರತ್ನಾಕರ, ಶೃತಿ ನಾವಿ, ರಕ್ಷಿತಾ ವಾಲಿ, ರಾಜಶ್ರೀ ಗಾಗರೆ ಮತ್ತಿತರರು ಭಾಗವಹಿಸಿದ್ದರು.