ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಪ್ರಶಸ್ತಿ

ದಾವಣಗೆರೆ.ಸೆ.೨೫; ಇತ್ತೀಚಿಗೆ ದಾವಣಗೆರೆನಲ್ಲಿ ನಡೆದ ರಾಷ್ಟ್ರ ಮಟ್ಟದ ಒಪನ್ ಇ-ಕತಾ ಚಾಂಪಿಯನ್ ಶಿಪ್ (ಆನ್‌ಲೈನ್ ) ಸ್ಪರ್ಧೆಯಲ್ಲಿ ನಗರದ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಂದಿರದ ವೈ.ಆರ್ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಶಾಲೆಯ ೧೨ ವಿದ್ಯಾರ್ಥಿಗಳು ಕತಾ ವಿಭಾಗದಲ್ಲಿ ಭಾಗವಹಿಸಿ, ೯ ಸ್ವರ್ಣ ಹಾಗೂ ೩ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ ಎಂದು ಮಂದಿರದ ಅಧ್ಯಕ್ಷರು ಪಿ.ಸಿ. ಮಹಾಬಲೇಶ್, ತರಬೇತುದಾರ ಸೆನ್ಸ್ ಯುವರಾಜ್ ಎಸ್., ತಿಳಿಸಿದ್ದಾರೆ.