ಕರಾಟೆಯಿಂದ ರೋಗ ನಿರೋಧಕ ಶಕ್ತಿ : ಜಿ.ಪ್ರೇಮ್‌ಕುಮಾರ್

ಹಿರಿಯೂರು.ಏ.19: ಕರಾಟೆ ಒಂದು ಅತ್ಯುತ್ತಮವಾದ ಕ್ರೀಡೆ ಇದನ್ನು ಕಲಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮ್ ಕುಮಾರ್ ಹೇಳಿದರು. ನಗರದ ಗುರುಭವನದಲ್ಲಿ ಬೂಡೋಕಿ ಶೀಟೊ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕರಾಟೆ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಇಂದಿನ ಕೊರೊನಾ ನಿಯಂತ್ರಿಸಲು ಕರಾಟೆ ಸೇರಿದಂತೆ ಯೋಗ ಮತ್ತಿತರೆ ಕ್ರೀಡೆಗಳನ್ನು ಕಲಿಯಬೇಕು ಎಂದು ಯುವಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಕರಾಟೆ ಕೋಚ್ ಶಿಹಾನ್ ಹೆಚ್.ಮಾಲತೇಶ್, ಎಂ.ಹೆಚ್.ರಮೇಶ್, ಮಹೇಂದ್ರ ಆಯಲ್ಕರ್, ಅಭಿಷೇಕ್, ದೈಹಿಕ ಪರಿವೀಕ್ಷಕ ಚಿದಾನಂದಸ್ವಾಮಿ, ಪರಶುರಾಮ್, ತರಬೇತುದಾರ ಪ್ರದೀಪ್, ಪ್ರಭು, ರಂಗಸ್ವಾಮಿ, ಮತ್ತಿತರರು ಇದ್ದರು.