ಕರಾಟೆಯಲ್ಲಿ ಬಹುಮಾನ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.12: ಜು. 9ರಂದು ಗದಗ ನಗರದಲ್ಲಿ ನಡೆದ “ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ”ಯಲ್ಲಿ ವಿಜಯಪುರ ನಗರದ, ಶಿವನೇರಿ ಭೀಮಾಬಾಯಿ ಸ. ಗಿಡ್ಡೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ರಾಜೇಶ ಎನ್. ಚವ್ಹಾಣ ಮತ್ತು ಭರತ ಜಿ. ಪತ್ತಾರ ಇವರು, 12 ರಿಂದ 13 ವಯಸ್ಸಿನ, ಕಟಾ ವಿಭಾಗದಲ್ಲಿ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿರುತ್ತಾರೆ. ದೇವಮಿತ್ರ ಎನ್. ಗಿಡ್ಡೆ ಈತನು, 7 ವರ್ಷ ಒಳಗಿನ, ಕಟಾ ವಿಭಾಗದಲ್ಲಿ ಭಾಗವಹಿಸಿ, ಶಾಲೆಗೆ ಮತ್ತು ನಮ್ಮ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಇವರ ಸಾಧನೆಯನ್ನು ಮತ್ತು ಕರಾಟೆ ತರಬೇತುದಾರರಾದ ಶ್ರೀ ಅಕ್ಷಯ ಹಿರೇಮಠ ಇವರ ಪ್ರಯತ್ನವನ್ನು ಮೆಚ್ಚಿ ಶಿವನೇರಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ವೃಂದದವರು ಹರ್ಷ ವ್ಯಕ್ತ ಪಡಿಸಿದರು.