ಕರಾಟೆಯಲ್ಲಿ ಎಕ್ಸಲಂಟ್ ಶಾಲೆ ಮಕ್ಕಳ ಜಿಲ್ಲಾ ಮಟ್ಟಕ್ಕೆ ಆಯ್ಕೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.5: ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ನಗರದ ಹೊರ ವಲಯದ ಇಟ್ಟಂಗಿಹಾಳದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರಾದ ಅನುಪಮ ಎನ್. ಬೆಳ್ಳುಬ್ಬಿ, ನಿಲವೇಣಿ ಕಾವೆಕರ, ಯುವರಾಜ ಚವ್ಹಾಣ, ಅಜಯ ಮುತ್ತತ್ತಿ, ಫೈಜುರ ಬಾಗೇವಾಡಿ, ಮಣಿಕಂಠ ಕಂಭಾಗಿ, ಮಾಣಿಕ್ಯ ಕೋಲೂರ ಪ್ರಥಮ ಸ್ಥಾನ ಪಡೆದು ಜಯಶಾಲಿಗಳಾಗಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಅಣಿಯಾಗಿರುವ ಈ ಮಕ್ಕಳ ಸಾಧನೆಗೆ ಎಕ್ಸಲಂಟ್ ಶಾಲೆಯ ಕೋ-ಆರ್ಡಿನೆಟರ್ ಎನ್.ಜಿ. ಯರನಾಳ, ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕರು ಎಸ್.ಬಿ. ಹಗಲಾಡಿ ಪ್ರೌಢಶಾಲೆಯ ಪ್ರಾಧ್ಯಾಪಕರು ರಾಜಶೇಖರ ವಿ. ಎಂ. ಕರಾಟೆ ತರಬೇತಿದಾರರು ಗೌರೀಶ ಜಿ. ಕಟ್ಟಿಮನಿ ಅಭಿನಂದನೆ ಸಲ್ಲಿಸಿದರು.