ಕರಾಟೆಗೆ ಕ್ರೀಡಾ ಮಾನ್ಯತೆ ಪ್ರಮಾಣಿಕ ಪ್ರಯತ್ನ:ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ,ಫೆ.26: ಸ್ವಯಂ ಆತ್ಮ ರಕ್ಷಣೆಯಲ್ಲಿ ಕರಾಟೆ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಕರಾಟೆಗೆ ಕ್ರೀಡಾ ಮಾನ್ಯತೆ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡುವುದುದಾಗಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ರವಿವಾರ ಕಲಬುರಗಿ ನಗರದ ಚಂಪಾ ಕ್ರೀಡಾಂಗಣದಲ್ಲಿ ಕೆ.ಕೆ.ಆರ್.ಡಿ.ಬಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕರಾಟೆ ಮತ್ತು ಕುಮಿಟೆ ಸ್ಪರ್ಧೇಯಲ್ಲಿ ಭಾಗವಹಿಸಿ ಮಾತನಾಡಿದರು.
ಏಳ ಜಿಲ್ಲೆಗಳ ಕರಾಟೆ ಪಟುಗಳು ಉತ್ಸವದ ಅಂಗವಾಗಿ ಒಂದೆಡೆ ಸೇರಿರುವುದು ಸಂತೋಷವಾಗಿದೆ. ಮಕ್ಕಳಿಗೆ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಯಂ ಆತ್ಮರಕ್ಷಣೆ ಮುಖ್ಯವಾಗಿರುವ ಹಿನ್ನೆಲೆಯಲ್ಕಿ ಕರಾಟೆ ಬೆಳವಣಿಗೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ ಮಾತನಾಡಿ, ಕಲಬುರಗಿಯಲ್ಲಿ ಕರಾಟೆ ತರಬೇತಿಗೆ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೆಣ್ಣು ಮಕ್ಕಳ ಕರಾಟೆ ಕುಮಿಟೆ ಸ್ಪರ್ಧೆಗೆ ಶಾಸಕ ದತ್ತಾತ್ರೇಯ ಪಾಟೀಲ ಚಾಲನೆ ನೀಡಿದಲ್ಲದೆ ಸ್ಪರ್ಧೆಯನ್ನು ಕುತೂಹಲದಿಂದ ವೀಕ್ಷಿಸಿದರು. ಕರಾಟೆ ಪಟುಗಳು ದತ್ತಾತ್ರೇಯ ಪಾಟೀಲ ರೇವೂರ ಅವರೊಂದಿಗೆ ಪೆÇೀಟೊ ಕ್ಲಿಕ್ಕಿಸಿ ಸಂಭ್ರಮಟ್ಟರು.
ಅರುಣ ಮಾಚಯ್ಯ ಅವರಿಗೆ ವಿಶೇಷ ಸನ್ಮಾನ: ಇದೇ ಸಂದರ್ಭದಲ್ಲಿ ಆಲ್ ಇಂಡಿಯಾ ಶಿಟೋರಿಯಾ ಕರಾಟೆ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮಾಜಿ ಎಂ.ಎಲ್.ಸಿ. ಅರುಣ ಮಾಚಯ್ಯ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
800 ಕರಾಟೆ ಪಟುಗಳು ಭಾಗಿ: 7 ಜಿಲ್ಲೆಗಳ ಸುಮಾರು 800 ಕರಾಟೆ ಪಟುಗಳು ಭಾಗವಹಿಸಿದ್ದು, ಕುಮಿಟೆ ಮತ್ತು ಕಟಾ ಸ್ಪರ್ಧೆಯಲ್ಲಿ ಬಾಗವಹಿಸಲಿದ್ದಾರೆ. ಮೊದಲ ಬಾರಿ ಇದು ಉತ್ಸವದ ಭಾಗವಾಗಿ ಆಯೋಜಿಸಿದ್ದು, ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಪಂದನೆ ದೊರೆತಿದೆ. ಸುಮಾರು 240 ಕ್ರೀಡಾಪಟುಗಳಿಗೆ 1,500 ರೂ. ಪ್ರಥಮ, 1,000 ದ್ವಿತೀಯ ಹಾಗೂ 500 ರೂ. ತೃತೀಯ ನಗದು ಬಹುಮಾನ ನೀಡಲಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರಾಗಿರುವ ಕಲ್ಯಾಣ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ದಶರಥ ದುಮ್ಮನಸೂರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿದ್ಯಾಸಾಗರ ಶಾಬಾದಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಅಖಿಲ ಕರ್ನಾಟಕ ಸ್ಪೋರ್ಟ್ ಅಸೋಸಿಯೇಷನ್ ಕಾರ್ಯದರ್ಶಿ ಭಾರ್ಗವ ರೆಡ್ಡಿ, ಕರಾಟೆ ತರಬೇತುದಾರರಾದ ಶಿವಲಿಂಗಪ್ಪ ಬೊಮ್ಮಾ, ವಿನೋದ ಬೊಮ್ಮಾ, ಕೃμÁ್ಣ ಗೌಳಿ, ರಾಮಚಂದ್ರ ಪಾಸರೆ, ಅಣ್ಣಪ್ಪ ಮಾರ್ಕಲಿ, ಕಟ್ಟೆಸ್ವಾಮಿ, ಮರಿಸ್ವಾಮಿ, ವಿನೋದ ಹೊಸಮನಿ, ಹಣಮಂತ ಭರತನೂರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕರಾಟೆ ಪಟುಗಳು ಇದ್ದರು.