ಕರವೇ ಹೋರಾಟಕ್ಕೆ ಸ್ಪಂದಿಸಿದ ನೆಹರು ಯುವ ಕೇಂದ್ರ

ದಾವಣಗೆರೆ.ನ.೩೦; ಯುವ ಪ್ರತಿಭೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಆಯೋಜಿಸಿದ್ದ ಆಶುಭಾಷಣ ಸ್ಪರ್ಧೆ  ವಿರೋಧ ವ್ಯಕ್ತಪಡಿಸಿಇತ್ತೀಚಿಗೆ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು  ಇದಕ್ಕೆ ಸ್ಪಂದಿಸಿದ ನೆಹರು ಯುವ ಕೇಂದ್ರದ ಅಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಡಿ.೩  ರಂದು ಬೆಳಗ್ಗೆ 11 ಗಂಟೆಗೆ ಕನ್ನಡದಲ್ಲಿ ಆಶುಭಾಷಣ ಸ್ಪರ್ಧೆ ನಡೆಸಲಾಗುವುದು ಎಂದು  ಕೇಂದ್ರದ ಸಹಾಯ ಅಧಿಕಾರಿ ಚಂದ್ರಶೇಖರ್  ತಿಳಿಸಿದ್ದಾರೆ ಹಾಗೂ ಕನ್ನಡದಲ್ಲೇ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿ ಪತ್ರವನ್ನು ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ಅವರಿಗೆ ನೀಡಿದ್ದಾರೆ