ಕರವೇ ಸುವರ್ಣ ಸಂಭ್ರಮ

photo from Madhu

ಬೆಂಗಳೂರು, ಸೆ. ೨೦- ಕರ್ನಾಟಕ ರಕ್ಷಣಾ ವೇದಿಕೆಯ ರಜತ ಮಹೋತ್ಸವ ಹಾಗೂ ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರ ೫೦ನೇ ಸುವರ್ಣ ಸಂಭ್ರಮ, ಕಾರ್ಯ
ಕರ್ತರ ಸಮಾಗಮದ ಸಮಾರಂಭ ಇಂದು ಸಂಜೆ ೪ ಗಂಟೆಗೆ ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‌ನಲ್ಲಿ ನಡೆಯಲಿದೆ.
ಕಳೆದ ೨೫ ವರ್ಷಗಳಿಂದ ನಾಡು – ನುಡಿಗಾಗಿ ಆಂದೋಲನ ನಡೆಸಿ, ಸಂಘಟಿಸಿ, ಕಾರ್ಯಕರ್ತರ ಕರ್ನಾಟಕ ರಕ್ಷಣಾ ವೇದಿಕೆ ಚಳವಳಿಯ ಜೊತೆಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಹೆಗ್ಗಳಿಕೆ ಶೆಟ್ಟಿ ಅವರದು.
ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿರವರು ಸತತವಾಗಿ ೨೫ ವರ್ಷಗಳಿಂದ ಕನ್ನಡಕ್ಕಾಗಿ, ಕನ್ನಡಿಗರಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಸಂಘಟನೆಯ ನಾಯಕರಾದ ಶ್ರೀ ಪ್ರವೀಣ್ ಶೆಟ್ಟಿರವರ ೫೦ನೇ ವರ್ಷದ ಹುಟ್ಟುಹಬ್ಬ ಹಾಗೂ ಸಂಘಟನೆಯ ರಜತ ಮಹೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಈ ಸಮಾರಂಭಕ್ಕೆ ರಾಜ್ಯದ ಸಮಸ್ತ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಬಳಗ ಪ್ರಕಟಣೆಯಲ್ಲಿ ಕೋರಿದೆ.