ಕರವೇ ಸಂಘಟನೆ : ರಾಜ್ಯೋತ್ಸವದ ಸಂಭ್ರಮ

ಲಿಂಗಸುಗೂರು.ನ.೨೧-ಕನ್ನಡ ನಾಡಿನಲ್ಲಿ ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಕನ್ನಡ ಪರ ಸಂಘಟನೆಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜೆಪಿ ಮುಖಂಡ ಡಾ.ಶಿವಬಸಪ್ಪ ಹೆಸರೂರು ಹೇಳಿದರು.
ಸ್ಥಳೀಯ ಐಎಂಎ ಸಭಾಂಗಣದಲ್ಲಿ ಶುಕ್ರವಾರ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕೊರೊನಾ ವಾರಿಯರ್‍ಸ್‌ಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಕಾಲದಲ್ಲಿ ಜನಸೇವೆಗೈದ ಸೇವಕರನ್ನು ನೆನೆಯುತ್ತಾ, ಅವರಿಗೆ ಸತ್ಕರಿಸಿ ಪ್ರೋತ್ಸಾಹಿಸುವ ಕಾರ್ಯ ಪ್ರಶಂಸನೀಯವೆಂದು ಬಣ್ಣಿಸಿದರು.ಮಾಜಿ ಸೈನಿಕರು, ಮಹಿಳಾ ಪೌರ ಕಾರ್ಮಿಕರು ಸೇರಿ ಕೊರೊನಾ ವಾರಿಯರ್‍ಸ್‌ಗಳಿಗೆ ಸಮಾರಂಭದಲ್ಲಿ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾದ್ಯಕ್ಷ ಮೊಹ್ಮದ್ ರಫಿ, ಸದಸ್ಯ ಅಬ್ದುಲ್‌ರೌಫ್ ಗ್ಯಾರಂಟಿ, ಸಮಾಜ ಸೇವಕ ಮಹ್ಮದ್ ಹಾಜಿಬಾಬಾ ಕರಡಕಲ್, ನಮ್ಮ ಕರವೆ ಸಂಘಟನೆಯ ಹೈದ್ರಾಬಾದ್ ಕರ್ನಾಟಕ ಅದ್ಯಕ್ಷ ರಾಜು ತಂಬಾಕೆ, ಜಿಲ್ಲಾಧ್ಯಕ್ಷ ವೆಂಕಟ ಸಾಗರ್, ತಾಲೂಕು ಅದ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಕಾರ್ಮಿಕ ಘಟಕದ ಅದ್ಯಕ್ಷ ಅಮರೆಗೌಡ ಕುಪ್ಪಿಗುಡ್ಡ, ಪ್ರದಾನ ಕಾರ್ಯದರ್ಶಿ ರಮೇಶ ಗುತ್ತೇದಾರ, ತಾಲೂಕು ಸಂಚಾಲಕ ನರೇಶ ರೆಡ್ಡಿ, ಮುಖಂಡರಾದ ಅಮರೇಶ ಮಡ್ಡಿ, ಎಂ.ಜಿಲಾನಿ, ಪರಶುರಾಮ ಕೆಂಭಾವಿ, ಶ್ವೇತಾ ಲಾಲಗುಂದಿ, ಜ್ಯೋತಿ ಸುಂಕದ್, ಸಾವಿತ್ರಿ, ಶಂಕ್ರಮ್ಮ ಸೇರಿ ಇತರರು ಇದ್ದರು.

೨೧ಎಲ್‌ಎನ್‌ಜಿ-೧. ನಮ್ಮ ಕರವೇಯಿಂದ ನಡೆದ ರಾಜ್ಯೋತ್ಸವ ಸಂಭ್ರಮ.