ಕರವೇ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

ಸೇಡಂ,ಜೂ, 05: ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷರಾದ ಶ್ರೀ ರಾಮಚಂದ್ರ ಗುತ್ತೇದಾರ್ ಅವರ ಹುಟ್ಟು ಹಬ್ಬ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಆಚರಣೆ ಮಾಡಲಾಯಿತು. ಈ ವೇಳೆಯಲ್ಲಿ ಕ.ರ.ವೇ.ತಾಲೂಕಾ ಉಪಾಧ್ಯಕ್ಷರು ಶ್ರೀ ಮಹೇಶ ಪಾಟೀಲ್ ಬಟೇಗೇರಾ, ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಪೂಜಾರಿ,ದೇವು ನಾಟೀಕರ್, ಭೀಮಯ್ಯ ಗುತ್ತೇದಾರ್ ಮದರಿ, ಶಾಲಾ ಮುಖ್ಯ ಗುರುಗಳು ಶ್ರೀ ತಿಮ್ಮಾರೆಡ್ಡಿ ಸರ್, ಶ್ರೀ ಜಗನ್ನಾಥ ಪಾಟೀಲ್ ಬಿಬ್ಬಳ್ಳಿ, ಕಿರಣ್ ಪಾಟೀಲ್, ಮಲ್ಲಿಕಾರ್ಜುನ ಬೇನಕನಹಳ್ಳಿ,ಗುಂಡಪ್ಪ ಪೂಜಾರಿ,ರವಿಸಿಂಗ್, ಸುಭಾಷ್ ಇಮಡಾಪುರ್, ರಾಘವೇಂದ್ರ ಹುಡಾ,ಆಶಾಪ್ಪ ಇಮಡಾಪುರ್, ಹಾಗೂ ಶಿಕ್ಷಕರ ವೃಂದ ಇದ್ದರು.