ಕರವೇ ನೂತನ ಪದಾಧಿಕಾರಿಗಳ ನೇಮಕ

ಕೆ.ಆರ್.ಪೇಟೆ.ಏ.05: ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಅಧ್ಯಕ್ಷರಾಗಿ ಮದನ್‍ಗೌಡ ಅವರು ಆಯ್ಕೆಯಾಗಿದ್ದು, ತಾಲ್ಲೂಕು ಕರವೇ ಸಂಚಾಲಕರಾಗಿ ಮ್ಯಾಕ್ಸಿಕ್ಯಾಬ್ ಜಹೀರ್ ಅಹಮದ್ ಅವರು ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹೊನ್ನೇನಹಳ್ಳಿ ಡಿ.ಎಸ್.ವೇಣು ಅವರು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಕರವೇ ಪದಾಧಿಕಾರಿಗಳ ಸಭೆಯಲ್ಲಿ ನೂತನ ನಗರ ಘಟಕದ ಅಧ್ಯಕ್ಷರು ಮತ್ತು ತಾಲ್ಲೂಕು ಸಂಚಾಲಕರ ಆಯ್ಕೆಯನ್ನು ಘೋಷಣೆ ಮಾಡಿ ಮಾತನಾಡಿ, ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳ ವಿರುದ್ದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಕರವೇ ಘಟಕವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ರಾಜ್ಯದಲ್ಲಿ ನಾಡು, ನುಡಿಯ ಹೋರಾ ಟದ ಜೊತೆಗೆ ಸಮಾಜ ಮುಖಿಯಾಗಿ ಹೋರಾಟದಲ್ಲಿಯೂ ನಂ. 01 ಸ್ಥಾನದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಗೆ ರಾಜ್ಯಾದ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಸುಮಾರು 80 ಲಕ್ಷ ಸಕ್ರಿಯ ಕಾರ್ಯ ಕರ್ತರು ಹೋರಾಟ ನಡೆಸುತ್ತಿದ್ದೇವೆ. ಅದೇ ರೀತಿ ತಾಲ್ಲೂಕಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ, ಭ್ರಷ್ಟಾಚಾರದ ವಿರುದ್ದ ಹೋರಾಟ, ತಾಲ್ಲೂಕಿನ ಹಲವು ಸಮಸ್ಯೆಗಳ ವಿರುದ್ದ ಹೋರಾಟ ಮಾಡುತ್ತಾ ಬಂದಿರುವ ಕರವೇ ಘಟಕಕ್ಕೆ ನೂತನವಾಗಿ ನಗರ ಘಟಕದ ಅಧ್ಯಕ್ಷರಾಗಿ ಮದನ್ ಗೌಡ ಹಾಗೂ ತಾಲ್ಲೂಕು ಸಂಚಾ ಲಕರಾಗಿ ಜಹೀರ್ ಅಹಮದ್ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಕರವೇ ಜನಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ವೇಣು ಮನವಿ ಮಾಡಿದರು.
ತಾಲ್ಲೂಕು ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ತಾಲ್ಲೂಕು ಕಾರ್ಯದರ್ಶಿ ಟೆಂಪೆÇೀ ಶ್ರೀನಿವಾಸ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅತ್ತಿಮರುವನಹಳ್ಳಿ ಆನಂದ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಸ್ವಾಮಿ, ಶೀಳನೆರೆ ಹೋಬಳಿ ಘಟಕದ ಅಧ್ಯಕ್ಷ ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.