ಕರವೇ ನಾರಾಯಣಗೌಡ್ರು ಬಂಧನ ಖಂಡಿಸಿ  ಎ ಸಿ ಕಚೇರಿಗೆ ಮುತ್ತಿಗೆ; ಉರುಳು‌ಸೇವೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಡಿ.೩೦; ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ್ರು ಸೇರಿದಂತೆ ಕರವೇ ಕಾರ್ಯಕರ್ತರ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾ ಕರವೇ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉರುಳುಸೇವೆ ಮೂಲಕ ಪ್ರತಿಭಟನೆ ‌ನಡೆಸಿದರು.ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ ಮಾತನಾಡಿಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ್ರು ಸೇರಿದಂತೆ 53 ಕಾರ್ಯಕರ್ತರನ್ನು ಬಂಧನ ಮಾಡುವ ಮೂಲಕ ರಾಜ್ಯ ಸರ್ಕಾರ ಕನ್ನಡ ನಾಡಿಗೆ ಮತ್ತು ಕನ್ನಡಿಗರಿಗೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲನೇ ಟೋಲ್ ದಾಸಹಳ್ಳಿಯಿಂದ ಕಬ್ಬನ್ ಪಾರ್ಕ್ ವರೆಗೂ   ಕನ್ನಡದ ನಾಮಫಲಕ ಕಡ್ಡಾಯ ಅಭಿಯಾನ ಪ್ರತಿಭಟನೆ ಮೆರವಣಿಗೆ ನಡೆಸುತ್ತೇವೆಂದು ಸರ್ಕಾರಕ್ಕೆ ತಿಳಿಸಿದ್ದು ಆದರೂ ಪೊಲೀಸರನ್ನು ಇಟ್ಟುಕೊಂಡು ಮೆರವಣಿಗೆಗೆ ಅವಕಾಶ ನೀಡದ ಕಾರಣ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.  ಆದಕಾರಣ ಕೆಲವು ಕಡೆ  ಆಂಗ್ಲನಾಮ ಫಲಕಗಳಿಗೆ ಮಸಿ ಬಳಿಯಲಾಯಿತು ಮತ್ತು ತೆರವುಗೊಳಿಸಲಾಯಿತು. ರಾಜ್ಯ ಸರ್ಕಾರಕ್ಕೆ ಕಾನೂನು ಮಾಡಿದೆ. ಕಾನೂನಿನ ಪ್ರಕಾರ ಅಂಗಡಿಯ ನಾಮಫಲಕಗಳು, ಜಾಹೀರಾತು ಫಲಕಗಳು, ಪೆಟ್ರೋಲ್ ಬಂಕ್ ಜಾಹೀರಾತು ಫಲಕಗಳು, ಐಟಿಬಿಟಿ ಕಂಪನಿಯ ನಾಮಫಲಕಗಳು ಕನ್ನಡದಲ್ಲಿ ಶೇಕಡ 60%ರಷ್ಟು ಇರಬೇಕೆಂದು ಸರ್ಕಾರ ಆದೇಶ ಮಾಡಿದ್ದರು ಸಹ, ಸರಿಯಾದ ಕ್ರಮ ಕೈಗೊಳ್ಳದೆ ಇರುವುದರಿಂದ ಸರ್ಕಾರ ಮಾಡಬೇಕಾದ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಅಂತ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಿಗೆ ನೋಟಿಸ್ ಕೊಡುವ ಮೂಲಕ ಮತ್ತು ಮಸಿ ಬಳಿಯುವಂತ ಕೆಲಸ ಬಿ.ಬಿ.ಎಂ.ಪಿ. ಮಾಡಬೇಕಾಗಿದೆ ಎಂದರು.