ಕರವೇ ತಾಲ್ಲೂಕಾಧ್ಯಕ್ಷರಿಂದ ಬಡವಿದ್ಯಾರ್ಥಿನಿಗೆ ನೆರವು


ಗುಳೇದಗುಡ್ಡ ಜ.6- ಪಟ್ಟಣದ ಪ್ರತಿಷ್ಠಿತ ಭಂಡಾರಿ ಹಾಗೂ ರಾಠಿ ಕಾಲೇಜಿನ ಕು. ಅಶ್ವೀನಿ. ಮಸಳಿ ಎಂಬ ಬಡ ವಿದ್ಯಾರ್ಥಿನಿಳಿಗೆ ಎರಡು ವರ್ಷದ ಉನ್ನತ ವ್ಯಾಸಂಗದ ಕಲಿಕೆಗೆ ಧನ ಸಹಾಯ ರೂಪದಲ್ಲಿ ರೂ. 30 ಸಾವಿರ ರೂ.ಗಳ ಚೆಕ್ ನೀಡುವುದರ ಮೂಲಕ ತಮ್ಮ ಜನ್ಮ ದಿನ ಆಚರಿಸಿಕೊಂಡ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕಾ ಅಧ್ಯಕ್ಷ, ಗುತ್ತಿಗೆದಾರ, ರವಿ ಅಂಗಡಿ ಅವರು ಸಾರ್ಥಕತೆ ಮೆರೆದಿದ್ದಾರೆ ಎಂದು ಪಿಇಟಿ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಅವರು ಭಂಡಾರಿ ಹಾಗೂ ರಾಠಿ ಕಾಲೇಜಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕಾ ಅಧ್ಯಕ್ಷ, ರವಿ ಅಂಗಡಿ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ದೈನಂದಿನ ಜೀವನದಲ್ಲಿ ಕೆಲವರು ದುಂದು ವೆಚ್ಚ ಮಾಡಿ ತಮ್ಮ ಜನ್ಮ ದಿನಾಚರಣೆ ಮಾಡಿಕೊಳ್ಳುವುದು ಸಾಮಾನ್ಯ, ಆದರೆ ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ರವಿ ಅಂಗಡಿ ಅವರು ಇದೇ ನಮ್ಮ ಕಾಲೇಜಿನಲ್ಲಿ ಕಲಿತಿದ್ದಾರೆ, ಆದರೆ ಅವರ ಕಲಿಕೆಗೆ ಅಂದು ಅವರ ಮನೆಯ ಆರ್ಥಿಕ ಪರಿಸ್ಥಿತಿ ತೊಂದರೆಯಾಗಿತ್ತು, ಇದನ್ನು ಅರಿತ ರವಿ ಅವರು, ಈಗಿನ ಪ್ರತಿಭಾವಂತ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಬಾರದೆಂದು ತಿಳಿದು, ನಮ್ಮ ಕಾಲೇಜಿನ ಎಂಕಾಂ ವಿಭಾಗದ ಬಡ ವಿದ್ಯಾರ್ಥಿನಿಳಿಗೆ ಎರಡು ವರ್ಷದ ಉನ್ನತ ವ್ಯಾಸಂಗದ ಕಲಿಕೆಗೆ ಧನ ಸಹಾಯ ರೂಪದಲ್ಲಿ ರೂ. 30 ಸಾವಿರ ರೂ.ಗಳ ಚೆಕ್ ನೀಡುವುದರ ಮೂಲಕ, ತಮ್ಮ ಜನ್ಮ ದಿನ ಆಚರಿಸಿಕೊಂಡು ಮಾನವೀಯತೆ ಮೆರೆಯುವುದರೊಂದಿಗೆ ಇತರÀರಿಗೆ ಮಾದರಿಯಾಗಿದ್ದಾರೆ ಎಂದರು.
ಪ್ರ್ರಾಚಾರ್ಯ ಎನ್.ವೈ.ಬಡನ್ನವರ ಮಾತನಾಡಿ, ರವಿ ಅಂಗಡಿ ಅವರು ಕೋವಿಡ್ ಸಂದರ್ಭದಲ್ಲಿ ಸಹ, ಕರವೇ ವತಿಯಿಂದ ಇಡೀ ತಾಲ್ಲೂಕಿನ ಕೊರೊನಾ ವಾರಿಯರ್ಸಗಳಿಗೆ, ಅಧಿಕಾರಿ ವರ್ಗದವರಿಗೆ, ಅಲ್ಲದೇ ಬಡ ಹಾಗೂ ನಿರ್ಗತಿಕರಿಗೆ ತಿಂಗಳುಗಟ್ಟಲೇ ಊಟ ನೀಡಿ ಸಹಾಯ ಮಾಡಿದ್ದಾರೆ, ಅಲ್ಲದೇ ಪಟ್ಟಣದಲ್ಲಿ ಶವ ಸಂಸ್ಕಾರ ವಿಧಿ-ವಿಧಾನಗಳ ಕಾರ್ಯಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿ ಬಂದು ನಿಲ್ಲುತ್ತಾರೆ. ಪಟ್ಟಣದ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸುವಲ್ಲಿ ತಮ್ಮ ಬೆಂಬಲಿಗರ ಜೊತೆ ಕೂಡಿಕೊಂಡು ಅಹೋರಾತ್ರಿ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ, ಯಾರಿಗಾದರೂ ತೊಂದರೆ ಇದ್ದರೆ ತಮ್ಮ ಕೈಲಾದಮಟ್ಟಿಗೆ ಸಹಾಯ ಮಾಡಿದ್ದಾರೆ. ಇದೀಗ ತಮ್ಮ ಜನ್ಮ ದಿನದ ಅಂಗವಾಗಿ ನಮ್ಮ ಕಾಲೇಜಿನಲ್ಲಿ ಸಸಿಗಳನ್ನು ಹಚ್ಚುವುದುರ ಪರಿಸರ ಪ್ರೇಮತ್ವ ಮೆರೆದಿದ್ದಾರೆ. ಒಟ್ಟಾರೆ ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ರವಿ ಅಂಗಡಿ ಅವರು ತಮ್ಮ ಸೇವಾ ಮನೋಭಾವನೆಯಿಂದ ತಮ್ಮ ಜನ್ಮ ದಿನ ಆಚರಿಸಿಕೊಳ್ಳುವ ಮೂಲಕ ಸಾರ್ಥಕತೆ ಮರೆದ ಅವರ ಕಾರ್ಯ ನಿಜವಾಗಿ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ರವಿ ಅಂಗಡಿ ಅವರು ಬಡವರಿಗೆ ಬಟ್ಟೆಗಳನ್ನು ವಿತರಿಸಿದರು. ರವಿ ಅಂಗಡಿ ಅವರ ಈ ಸೇವಾ ಮನೋಭಾವದ ಕಾರ್ಯಕ್ಕೆ ಪಟ್ಟಣದ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪಿಇಟಿಯ ಪಿಯು ವಿಭಾಗದ ಚೇರ್ಮನ್ ಸಂಗಣ್ಣ ಪಟ್ಟಣಶೆಟ್ಟಿ, ಆಂಗ್ಲಮಾಧ್ಯಮ ಶಾಲೆಯ ಚೇರ್ಮನ್ ಅಶೋಕ ಹೆಗಡಿ, ಪ್ರ್ರಾದ್ಯಾಪಕ, ಬಿ.ಯು. ಹಣಗಿ, ಸುರೇಖಾ ಯಂಡಿಗೇರಿ, ಎಸ್.ಎಸ್. ಸಾರಂಗಿ, ಚಿದಾನಂದ ನಂದಾ, ಡಾ. ಗಿರೀಶಕುಮಾರ ಎಂ. ಎಸ್.ಎಸ್. ಬಳಿಗೇರಿ ಮತ್ತಿತರರಿದ್ದರು.