ಕರವೇ ತಾಲೂಕಾ ಅಧ್ಯಕ್ಷ ನೇಮಕ

(ಸಂಜೆವಾಣಿ ವಾರ್ತೆ)
ಚಿತ್ತಾಪೂರ :ಜೂ.9: ಕರ್ನಾಟಕ ರಕ್ಷ ಣಾ ವೇದಿಕೆ ತಾಲೂಕಾ ನೂತನ ಅಧ್ಯಕ್ಷರಾಗಿ ಸ್ಟೇಶನ್ ತಾಂಡಾದ ಚಂದರ ತಂದೆ ಹರಿಶ್ಚಂದ್ರ ಚವ್ಹಾಣ್ ನೇಮಕಗೊಂಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಿಗೆ ನೇಮಕಾತಿ ಪತ್ರ ನೀಡುವ ಮೂಲಕ ಅಭಿನಂದಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಪುನಿತರಾಜ ಕವಡೆ ನಾಡು, ನುಡಿ,. ನೆಲ, ಜಲ ಬಾಷೆಗೆ ಇರುವ ಪ್ರಿ?ತಿ, ಕಾಳಜಿ ಕಂಡು ತಾಲೂಕ ಘಟಕಕ್ಕೆ ನೇಮಕ ಮಾಡಿದ್ದು ರಾಜಕೀಯ ರಹಿತ ಹೋರಾಟ ಮಾಡಿ ಕನ್ನಡ ನಾಡಿನ ರಕ್ಷಣೆಗೆ ಬದ್ದರಾಗಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ ಕಾಶಿ, ಧರ್ಮಸಿಂಗ್ ತಿವಾರಿ, ವಿಠಲ ಪೂಜಾರಿ, ದೇವಿಂದ್ರ ಮಯೂರ, ಮಹಾದೇವ ತೆಲಗೂರ, ಮೋನಪ್ಪ ಹಾದಿಮನಿ, ಪರಮೇಶ್ವರ ಜಳಕಿ, ಮಹಾದೇವ ಜೀವಣರ, ವೀರಪ್ಪ ನಡುವಿನಕೇರಿ, ಅನಿಲಸ್ವಾಮಿ, ಸೇರಿದಂತೆ ಇತರರು ಇದ್ದರು.