
ಯಾದಗಿರಿ: ಮಾ.6: ಯಾದಗಿರಿ ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕರವರು
ಜಗದ್ಗುರುಗಳಾದ ರೇಣುಕಾಚಾರ್ಯರು ಮಾನವ ಧರ್ಮ ಸಂಕೋಲದ ಸಿದ್ಧಾಂತ ವಿಚಾರಧಾರೆಗಳನ್ನು ಹೊಂದಿದ ಆಧರ್ಶ ಹಾಗೂ ಸುಮಾರ ವರ್ಷಗಳ ಕಾಲ ಧರ್ಮ ಪ್ರಚಾರಮಾಡಿ ಲೋಕ ಸಂಚರಿಸಿದÀ ಏಕೈಕ ಗುರುಗಳೆಂದರು ತಪ್ಪಾಗಲಾರದು ಎಂದು ಹೇಳಿದರು,
ರೇಣುಕಾಚಾರ್ಯರು ಸಮಸ್ತ ಜಗತ್ತಿಗೆ ವೀರಶೈವ ಧರ್ಮ ಸಿದ್ದಾಂತವನ್ನು ಉಪದೇಶಿಸಿ ಮನುಕೂಲದ ಒಳಿತಿಗಾಗಿ ಭವಿಷ್ಯದಲ್ಲಿ ಮನುಷ್ಯನಲ್ಲಿ ಕ್ರೂರತ್ವ, ಅಧರ್ಮದ ಗುಣಗಳನ್ನು ದೂರಮಾಡಿ ಸುಜ್ಞಾನದ ಚಿಂತನೆಗಳನ್ನು ಬಿತ್ತಿದಂತ ಜಗದ್ಗುರುಗಳಾಗಿ ಲೋಕಕಲ್ಯಾಣಕ್ಕೆ ಮುನ್ನುಡಿ ಬರೆದರು, ಮಾನವ ಧರ್ಮಕ್ಕೆ ಜಯವಾಗಲಿ ಯೆಂದು ಯಾವುದೇ ಜಾತಿ ಧರ್ಮಕ್ಕೆ ಸಿಮಿತವಾಗದೆ ಸಮಸ್ತ ಮನುಕೂಲಕ್ಕೆ ಸಮಾನತೆಯ ಬೀಜಬಿತ್ತಿದಂತ ಜಗದ್ಗುರುಗಳಾದ ಶ್ರೀ ರೇಣುಕಾಚಾರ್ಯರ ನಡೆ,ಆದರ್ಶವನ್ನು ನಾವೆಲ್ಲರು ಪಾಲಿಸಬೇಕು ಮಾನವ ಧರ್ಮಕ್ಕೆ ಜಯವಾಗುವ ನಿಟ್ಟಿನಲ್ಲಿ ಒಗ್ಗೂಡಿ ಸಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ಕೆಲಸಮಾಡುವಂತಹದಾಗಬೇಕು ಎಂದು ನುಡಿದರು
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಅಂಬ್ರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಕಾಶಿನಾಥ ನಾನೇಕ, ಅಬ್ದುಲ್ ಚಿಗಾನೋರ, ಬಸವರಾಜನಾಯಕ ಸೈದಾಪೂರ, ಮಂಜುನಾಥ.ಬಿ.ನಾನೇಕ, ಮಹ್ಮದ್ ಖತಾಲಿ, ಶ್ರೀನಿವಾಸ ಮಡಿವಾಳ ಉಪಸ್ಥಿತರಿದ್ದರು.