ಕರವೇ ಜಿಲ್ಲಾಧ್ಯಕ್ಷರ ಪದಗ್ರಹಣ

ಬೀದರ್:ನ.25: ಕರ್ನಾಟಕ ರಕ್ಷಣಾ ವೇದಿಕೆ ಬೀದರ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಮಂಗಳವಾರ ನಗರದ ಸಪ್ನಾ ಇಂಟರ್ ನ್ಯಾಷನಲ್‍ನಲ್ಲಿ ಜರುಗಿತು.
ಸಮಾರಂಭ ಉದ್ಘಾಟಿಸಿದ ಕರವೇ ಅಧ್ಯಕ್ಷ ಪ್ರವೀಣಶೆಟ್ಟಿ ಮಾತನಾಡಿ, ನಾಡು-ನುಡಿ, ಜಲ ರಕ್ಷಣೆಗೆ ವೇದಿಕೆ ಶ್ರಮಿಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ವೇದಿಕೆ ಶಾಖೆಗಳಿವೆ ಎಂದು ಹೇಳಿದರು.
ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದಗೆ ಮಾತನಾಡಿ, ಈ ಭಾಗದಲ್ಲಿ ವೇದಿಕೆ ಬಲಿಷ್ಠಗೊಳಿಸಲು ವಿವಿಧ ಜಿಲ್ಲೆಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡಿ, ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು
ವೇದಿಕೆ ಜಿಲ್ಲಾಧ್ಯಕ್ಷ ಪೀಠರ್ ಚಿಟಗುಪ್ಪ ಮಾತನಾಡಿ, ವೇದಿಕೆಯನ್ನು ಜಿಲ್ಲಾದ್ಯಂತ ಬಲಿಷ್ಠಗೊಳಿಸಲು ಶ್ರಮಿಸಲಾಗುವುದು. ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಘಟಕಗಳನ್ನು ರಚಿಸಿ, ಪದಾಧಿಕಾರಿಗಳನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು ಎಂದು ಹೇಳಿದರು.
ವೇದಿಕೆ ಕಾರ್ಯದರ್ಶಿ ಲೋಕೇಶ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಪ್ರಮುಖರಾದ ರಾಜಶೇಖರ ಹಲಮಡಗೆ, ಜಗನ್ನಾಥ ಕೌಠಾ, ಭರತ ಸಿದ್ಧಾ, ಗುರುರಾಜ ಮೇತ್ರೆ, ಸೈಮನ್ ಚಿಲ್ಲರ್ಗಿ, ಎಲಿಶ್ ಜ್ಯಾಂತೆ, ಡ್ಯಾನಿಯಲ್ ಆಣದೂರಕರ್ ಇತರರರಿದ್ದರು.