ಕರವೇಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು- ಹಂಪಲು ವಿತರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೧೦;  ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡ್ರ 57 ನೇ ಜನ್ಮದಿನದ ಅಂಗವಾಗಿ ಸರ್ಕಾರಿ ಆಸ್ಪತ್ರೆ ಮಕ್ಕಳ ವಾರ್ಡ್ ಮತ್ತು ಹೆರಿಗೆ ವಾರ್ಡಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ನಾರಾಯಣಗೌಡರವರು ಲಕ್ಷಾಂತರ ಯುವಕರಿಗೆ ಕನ್ನಡದ ದೀಕ್ಷೆ ನೀಡುವ ಮೂಲಕ ಹೋರಾಟಗಾರರನ್ನು ಸೃಷ್ಟಿ ಮಾಡಿದ್ದಾರೆ ಅಂತಹ ಮಹಾನ್ ನಾಯಕರ ಜನ್ಮದಿನ ಆಚರಣೆ ಮಾಡುವುದು ಪುಣ್ಯದ ಕೆಲಸ. ಈ ಪುಣ್ಯದ ಕೆಲಸದಲ್ಲಿ ಭಾಗವಹಿಸುವುದೇ ನಮ್ಮೆಲ್ಲರ ಪುಣ್ಯ ಗೌಡರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವಾರು ಬಾರಿ ರಕ್ತದಾನ ಶಿಬಿರ, 10 ಸಾವಿರಕ್ಕಿಂತ ಹೆಚ್ಚು ಸಸಿಗಳು ನೆಡುವ ಮೂಲಕ ಮತ್ತು ರಾಜ್ಯ ವ್ಯಾಪ್ತಿ ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ಮತ್ತು ಮಕ್ಕಳಿಗೆ, ಅನಾಥಾಶ್ರಮ, ವೃದ್ಧರಿಗೆ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಕಳೆದ 26 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ತಾಯಿ ಭುವನೇಶ್ವರಿ ಹಾರೈಸಲೆಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಬಸಮ್ಮ .ಶಾಂತಮ್ಮ. ಮಂಜುಳಾ ಗಣೇಶ್   . ಓ.ಮಹೇಶ್ವರಪ್ಪ. ಗೋಪಾಲ ದೇವರಮನೆ .ಎನ್‌ಬಿಎ ಲೋಕೇಶ್ ‌.ಧರ್ಮರಾಜ್ . ಎನ್ ಟಿ ಹನುಮಂತಪ್ಪ ಪರಮೇಶ್ .ಸೋಮಶೇಖರ್, ಗಂಗಾಧರ್ ಕೋಡಿಹಳ್ಳಿ .ಎಂಡಿ ರಫೀಕ್ .ರವಿಕುಮಾರ್ .ಆಟೋ ರಫೀಕ್ .ಸುರೇಶ್ .ಅಯುಬ್. ಗುರುಮೂರ್ತಿ .ದಾದಾಪೀರ್ .ಸುರೇಶ್. ರಮೇಶ್ .ಅಕ್ಷಯ್. ರಾಕೇಶ್. ಕರಿ ಬಸವರಾಜ್ .ಕಾಸಿಂ  .ನಾಗರಾಜ್. ಸಂಜು .ಭಾಷಾ .ತನ್ವೀರ್. ಜೈನ್ ಭಾರತಿ. ಓಬಲೇಶ್  ಉಪಸ್ಥಿತರಿದ್ದರು.