ಕರವೇಯಿಂದ ಕುವೆಂಪು ಸ್ಮರಣೆ

ದಾವಣಗೆರೆ.ಡಿ.೨೯; ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಮ್ಮಮಿಕೊಂಡಿದ್ದವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯನ್ನು ಮಹಾನಗರಪಾಲಿಕೆಯ ಮೇಯರ್ ಬಿ ಜಿ ಅಜಯ್ ಕುಮಾರ್  ಪುಷ್ಪಾರ್ಚನೆ ಮಾಡುವ  ಹಾಗೂ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು. ಮಹಾನಗರಪಾಲಿಕೆ ವಿಪಕ್ಷನಾಯಕ ನಾಗರಾಜ್ ಕರವೇ ಪಾದಚಾರಿ ವ್ಯಾಪಾರಿ ಘಟಕದ ಪದಾಧಿಕಾರಿಗಳಿಗೆ ನಗರಪಾಲಿಕೆಯ ಬೀದಿಬದಿ ವ್ಯಾಪಾರಿಗಳ ಕಾರ್ಡ್ ವಿತರಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಯಶೋಧ ಯೋಗೇಶ್, ಪಾಲಿಕೆಯ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಎಸ್ ಟಿ ವೀರೇಶ್, ಕೆ ಪ್ರಸನ್ ಕುಮಾರ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಟಿ ಶಿವಕುಮಾರ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಕಾಡಜ್ಜಿ ಮಂಜುನಾಥ್,  ಪತ್ರಕರ್ತರಾದ ಅಶೋಕ್. ಚನ್ನಬಸವ ಶೀಲವಂತ್. ದಾವಣಗೆರೆ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಆಯುಬ್ ಪೈಲ್ವಾನ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಮಂಜುಳಮ್ಮ ಶಾಂತಮ್ಮ ಸಾಕಮ್ಮ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷರಾದ ಎಂಎಸ್ ರಾಮೇ ಗೌಡ ವಹಿಸಿದ್ದರು.