ಕರವೇಯಿಂದ ಕುವೆಂಪು ಜನ್ಮದಿನಾಚರಣೆ

ದಾವಣಗೆರೆ. ಡಿ.೨೮; ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿಶ್ವಮಾನವ ರಾಷ್ಟ್ರ ಕವಿ ಕುವೆಂಪು ಅವರ 116 ನೇ ಜನ್ಮದಿನಾಚರಣೆ ಹಾಗೂ ಕನ್ನಡ ಧ್ವಜಸ್ತಂಭ ಉದ್ಘಾಟನೆ ನಾಳೆ ಬೆಳಗ್ಗೆ 9.30 ಕ್ಕೆ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಹೊಟೆಲ್ ಹಳೇಮನೆ ಬಳಿ ನಡೆಯಲಿದೆ.ಮೇಯರ್ ಬಿ.ಜಿ ಅಜಯ್ ಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ.ಕರವೇ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯರಾದ ಎಸ್.ಟಿ ವೀರೇಶ್,ಪ್ರಸನ್ನ ಕುಮಾರ್,ದಿನೇಶ್ ಶೆಟ್ಟಿ, ಜೆ.ಎನ್ ಶ್ರೀನಿವಾಸ್,ದೇವರಮನೆ ಶಿವಕುಮಾರ್,ಯಶೋಧ ಯೋಗೀಶ್ ಆಗಮಿಸಲಿದ್ದಾರೆ.ಪಾಲಿಕೆ ವಿಪಕ್ಷ ನಾಯಕ ಎ ನಾಗರಾಜ್ ಕಾರ್ಡ್ ವಿತರಣೆ ಮಾಡಲಿದ್ದಾರೆ.