ಕರವೇಯಿಂದ ಕನ್ನಡ ರಾಜ್ಯೋತ್ಸವ

ದಾವಣಗೆರೆ.ನ.೨೦; ಕರ್ನಾಟಕ ರPಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ)ಯಿಂದ ಕನ್ನಡ ರಾಜ್ಯೋತ್ಸವವನ್ನು ತಾಲ್ಲೂಕು ಅಧ್ಯPರಾದ ಸೈಯದ್ ನಜೀರ್‌ರವರ ನೇತೃತ್ವದಲ್ಲಿ ನಗರದ ಪಿ.ಬಿ. ರಸ್ತೆಯಲ್ಲಿರುವ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯಾಧ್ಯPರಾದ ಪ್ರವೀಣ್‌ಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ, ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಗಳು ತುಂಬಾ ಶ್ಲಾಘನೀಯ. ಈ ಮಹಾಮಾರಿ ಕೊರೋನ ಸಂದರ್ಭದಲ್ಲಿ ಬಡ ಮಕ್ಕಳಿಗೆ ನೋಟ್ ಬುಕ್ ಹಾಗೂ ಜಾಮಿಟ್ರಿ ಬಾಕ್ಸ್ ವಿತರಿಸಿ, ಆಟೋ ಚಾಲಕರಿಗೆ ಯೂನಿಫಾರಂಗಳನ್ನು ವಿತರಿಸಿರುವುದು ಹರ್ಷ ತಂದಿತು ಎಂದರು.
ಇದೆಲ್ಲದರ ನಡುವೆ ಮರಾಠಿಗರ ಅಭಿವೃದ್ದಿ ಪ್ರಾಧಿಕಾರವನ್ನು ೫೦ ಕೋಟಿ ರೂ. ನೀಡುವ ಮೂಲಕ ಮಾಡಲು ಮುಂದಾಗಿರುವುದು ಖಂಡನೀಯವೆಂದರು. ಕರ್ನಾಟಕದ ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಇಂದಿನ ರಾಜ್ಯ ಸರ್ಕಾರ ಮಾಡುತ್ತಿರುವ ಅವೈeನಿಕ ಆದೇಶಗಳನ್ನು ಖಂಡಿಸಿದರು ಹಾಗೂ ಮರಾಠ ಅಭಿವೃದ್ಧಿ ಮಂಡಳಿ ರಚನೆ ಸರಿಯಲ್ಲವೆಂದರು. ಇತರರಿಂದ ಗಡಿಭಾಗದ ಹಾಗೂ ರಾಜ್ಯದ ಒಳಗೆ ಗಲಭೆಗಳು ನಡೆಯಲು ಸರ್ಕಾರ ಅನುವು ಮಾಡಿಕೊಡುತ್ತಿದೆ ಎಂದು ರಾಜ್ಯಾಧ್ಯPರಾದ ಪ್ರವೀಣ್‌ಕುಮಾರ್ ಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯP ಶಿವರಾಜ್‌ಗೌಡ, ಸಹಕಾರ್ಯದರ್ಶಿ ಪ್ರಸನ್ನಶೆಟ್ಟಿ, ರಾಜ್ಯ ಸಂಚಾಲಕರು ಮತ್ತು ದಾವಣಗೆರೆ ಉಸ್ತುವಾರಿ ಲೋಕೇಶ್, ಜಿಧ್ಯP ಜಮ್ನಳ್ಳಿ ನಾಗರಾಜ್ ಮತ್ತು ಜಿ ಘಟಕದ ಪದಾಧಿಕಾರಿಗಳು ಹಾಗೂ ದಕ್ಷಿಣ ವಲಯದ ಪದಾಧಿಕಾರಿಗಳು ಮತ್ತು ತಾಲ್ಲೂಕು ಗೌರವಾಧ್ಯP ಕೆ.ಬೀರಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ. ರವಿಕುಮಾರ್, ತಾಲ್ಲೂಕು ಉಪಾಧ್ಯP ನಾಗರಾಜಯ್ಯ ಟಿ.ಎಂ., ತಾಲ್ಲೂಕು ಕಾರ್ಯದರ್ಶಿ ವಾಮದೇವ ಡಿ.ಎಂ., ತಾಲ್ಲೂಕು ಯುವಘಟಕದ ಅಧ್ಯP ಜಮಾಲ್‌ಸಾಬ್, ಟ್ಯಾಕ್ಸಿ ವಾಹನ ಚಾಲಕ ಅಧ್ಯP ಇರ್ಫಾನ್ ಸೇರಿದಂತೆ ನಂದೀಶ್, ಸಂತೋಷ್, ಮಹೇಶ್ ಅರಣ ಶೆಟ್ರು, ಪುಟ್ಟರಾಜು, ಮಾಧ್ಯಮ ಸಂಚಾಲಕರು ಸಿ.ಕೆ. ರಂಗಪ್ಪ ಉಪಸ್ಥಿತರಿದ್ದರು.