ಕರವೇ(ಪ್ರವೀಣ್ ಶೆಟ್ಟಿ ಬಣ) ವತಿಯಿಂದಸೆ.17ಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಹೈ-ಕ ವಿಮೋಚನಾ ಸಂಭ್ರಮ

ಕಲಬುರಗಿ: ಸೆ.17:ಇದೇ 17ರಂದು ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕದಲ್ಲಿ 74ನೇ ಹೈ.ಕ. ವಿಮೋಚನಾ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರವೇ(ಪ್ರವೀಣ ಶೆಟ್ಟಿ ಬಣ) ದ ಕಲ್ಯಾಣ ಕರ್ನಾಟಕ ಪ್ರ. ಕಾರ್ಯದರ್ಶಿ ಗೋಪಾಲ ನಾಟೀಕಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸಾರಂಗ ಪೀಠ ಶ್ರೀಶೈಲಂನ ಜಗದ್ಗುರು ಡಾ. ಸಾರಂಗಧರ ದೇಶೀಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟಕರಾಗಿ ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಬಸವರಾಜ ಮತ್ತಿಮಡು ಪಟೇಲರ ಪುತ್ಥಳಿ ಮಾಲಾರ್ಪಣೆ ಮಾಡಲಿದ್ದು, ಅಧ್ಯಕ್ಷತೆಯನ್ನು ಶಶೀಲ್ ಜಿ. ನಮೋಶಿ ವಹಿಸಲಿದ್ದಾರೆ. ಹೈ.ಕ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪಾ, ಜಿ.ಪಂ. ಮಾಜಿ ಅಧ್ಯಕ್ಷ ನಿತಿನ ಗುತ್ತೇದಾರ, ಜೆ.ಡಿ.ಎಸ್. ಮುಖಂಡ ನಾಸಿರ್ ಹುಸೇನ್ ಉಸ್ತಾದ್, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಕ.ಸಾ.ಪ. ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಆದಿಜಾಂಬವ ಅಭಿವೃದ್ಧಿ ನಿಗಮಸ ವ್ಯವಸ್ಥಾಪಕ ನಿರ್ದೇಶಕ ಜಗದೇವಪ್ಪ ಮುಗುಟಾ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ, ಕಾಂಗ್ರೆಸ್ ಯುವ ಮುಖಂಡ ಅಂಗರಾಜ ತಾರಫೈಲ್, ಅಖಿಲ ಭಾರತ ವೀರಶೈವ ಮಹಾಸಭೆ ಮಹಿಳಾ ಅಧ್ಯಕ್ಷೆ ಡಾ| ಸುಧಾ ಹಾಲಕಾಯಿ ಭಾಗವಹಿಸಲಿದ್ದಾರೆ.

ಉತ್ತರ ಕರ್ನಾಟಕ ಅಧ್ಯಕ್ಷ ಡಾ|| ಶರಣು ಬಿ. ಗದ್ದುಗೆ ರವರು ನೇತೃತ್ವ ವಹಿಸಲಿದ್ದು, ಅಭಿಷೇಕ ಬಾಲಾಜಿ, ಗೋಪಾಲ ನಾಟೀಕಾರ, ಸಂತೋಷ ಚೌಧರಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಶಿವಪ್ಪ ಎ.ಎನ್. ಬಾಬುರಾವ ಯಡ್ರಾಮಿ, ಶಿಹಾನ್ ದಶರಥ ಧುಮ್ಮನಸೂರು, ಸೋಮನಾಥ ಎಲ್. ಕಟ್ಟಿಮನಿ, ಮಿರ್ಜಾ ಅಫರೋಜ್ ಬೇಗ್, ಜಗನ್ನಾಥ ಸೂರ್ಯವಂಶಿ, ಶರಣು ಅರಮನಿ, ರಾಕೇಶ್ ವಾಡೇಕರ, ಜಗದೀಶ ದೇಶಮುಖ, ರಾಹುಲ್ ಹೊನ್ನಳ್ಳಿ ಅವರಿಗೆ ವಿಶೇಷ ಗೌರವ ಸತ್ಕಾರ ಮಾಡಲಾಗುವುದು.

ಅಂದು ಸಂಜೆ 5 ಗಂಟೆಗೆ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಮಾರಂಭ ಜರುಗಲಿದ್ದು, ದೇಶಭಕ್ತಿ ಗೀತೆಗಳ ರಸಮಂಜರಿಯೂ ಆಯೋಜಿಸಲಾಗಿದೆ,ಆದ್ದರಿಂದ ಆಸಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.