ಕರಬೂಜದ ಹಣ್ಣು ಬಹಳ ಜನಪ್ರಿಯ ಹಾಗೂ ಎಲ್ಲರೂ ಇಷ್ಟಪಡುವ ಹಣ್ಣು ಈ ಶೀತೋಷ್ಣ ಗುಣವುಳ್ಳದ್ದು. ಈ ಹಣ್ಣು ಬಹಳ ಬೇಗ ಜೀರ್ಣವಾಗುತ್ತದೆ. ಶರೀರಕ್ಕೆ ಸೇರಿರುವ ಕಲ್ಮಷಗಳನ್ನು ಹೋಗಲಾಡಿಸುತ್ತದೆ. ಮೂತ್ರ ಕೋಶದಲ್ಲಿನ ಹರಳನ್ನು ಕರಗಿಸುತ್ತದೆ. ಮೂತ್ರ ವಿಸರ್ಜನೆ ಸುಲಭವಾಗಿ ಆಗುವಂತೆ ಮಾಡುತ್ತದೆ. ಹಾಲುಣಿಸುವ ತಾಯಂದಿರಿಗೆ ಎದೆಯ ಹಾಲು ವೃದ್ಧಿಸುತ್ತದೆ.
ಪೋಷಕಾಂಶಗಳು: ಕರಬೂಜದ ಹಣ್ಣಿನಲ್ಲಿರುವ ಪೋಷಕಾಂಶಗಳು ಯಾವುದೆಂದರೆ, ತೇವಾಂಶ, ಸಸಾರಜನಕ, ಕೊಬ್ಬು ಶರ್ಕರಪಿಷ್ಠ, ಸುಣ್ಣ, ರಂಜಕ, ಕಬ್ಬಿಣ, ಕೆರೊಟಿನ್, ಥಯಾಮಿನ್, ನಿಯಾಸಿನ್ ಹಾಗೂ ಎ ಮತ್ತು ಸಿ ಜೀವಸತ್ವಗಳು.
೧. ವೀರ್ಯವೃದ್ಧಿ: ಕರಬೂಜದ ಬೀಜಗಳು ಮಧುಮೇಹ ರೋಗವನ್ನು ಶಾಂತ ಗೊಳಿಸುತ್ತದೆ. ವೀರ್ಯವನ್ನು ಶುದ್ಧಿಗೊಳಿಸುತ್ತದೆ, ಸಂತಾನಭಾಗ್ಯ ಸುಗಮವಾಗುತ್ತದೆ.
೨. ಮೂತ್ರ ಕೋಶದ ಸಮಸ್ಯೆ, ಮೂತ್ರ ಹಾಗೂ ವೀರ್ಯಶುದ್ಧಿ: ಕರಬೂಜದ ಹಣ್ಣಿನ ಬೀಜದ ಚೂರ್ಣ ತಯಾರಿಸಿದ್ದನ್ನು, ಪ್ರತಿನಿತ್ಯ ಜೇನುತುಪ್ಪದೊಡನೆ ಸೇವಿಸುವುದರಿಂದ, ಮೂತ್ರಕೋಶದ ಸಮಸ್ಯೆ, ಮೂತ್ರ ಹಾಗೂ ವೀರ್ಯವನ್ನು ಶುದ್ಧೀಕರಿಸಲು ಸಹಾಯವಾಗುತ್ತದೆ.
೩. ಈ ಹಣ್ಣನ್ನು ಊಟದ ನಂತರ ಸೇವಿಸಿದರೆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ಕಫ ಪ್ರಕೃತಿಯವರು ಅತಿಯಾಗಿ ಸೇವಿಸಬಾರದು. ಸ್ವಲ್ಪ, ಸ್ವಲ್ಪ ಸೇವಿಸಿದರೆ ಉತ್ತಮ.
೪. ಮಲಬದ್ಧತೆ ನಿವಾರಣೆ: ಮಲಬದ್ಧತೆ ಇರುವವರಿಗೆ ಹಣ್ಣು ಒಳ್ಳೆಯದು. ಆದರೆ ಅತಿಯಾಗಿ ಸೇವಿಸಿದರೆ ಬೇಧಿಯಾಗುತ್ತದೆ.
ವಿವಿಧ ರೀತಿ: ಕರಬೂಜದ ಜಾತಿಗೆ ಸೇರಿದ ಇನ್ನೊಂದು ಹಣ್ಣು ಕೆಕ್ಕರಿಕೆ ಹಣ್ಣು, ಸಿದ್ದೋಟ ಹಣ್ಣು ಎಂದೂ ಕರೆಯುತ್ತಾರೆ. ನೋಡಲು ಹಾಗೂ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಆದರೆ ಗುಣದಲ್ಲಿ ಎರಡೂ ಒಂದೇ. ಇದರ ಬೀಜವೂ ಸಹ ಕರಬೂಜದ ಹಣ್ಣಿನ ಬೀಜದ ರೀತಿ ಉಪಯೋಗಕ್ಕೆ ಬರುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧