ಕರಪತ್ರ, ಭಿತ್ತಿಚಿತ್ರ ಬಿಡುಗಡೆ

ಬಾದಾಮಿ,ಜೂ10: ಕಸ್ತೂರಬಾ ಗಾಂಧಿ ಬಾಲಕೀಯರ ವಸತಿ ಶಾಲೆ ಅನಾಥ, ತಂದೆ,/ ತಾಯಿ ಇಲ್ಲದ, ಬಡತನ ರೇಖೆಗಿಂತ ಕೆಳಗಿರುವ, ಶಾಲೆಯಿಂದ ಹೊರಗುಳಿದ/ಶಾಲೆ ಬಿಟ್ಟ ಹಾಗೂ ಇತರೆ ಮೈನಾರಿಟಿ ವರ್ಗದ ಬಾಲಕಿಯರಿಗೆ ಆಸರೆಯಾಗಿದೆ ಎಂದು ಶಾಲಾ ಶಿಕ್ಷಣ ಉಪನಿರ್ದೇಶಕ ಬಿ.ಕೆ.ನಂದನೂರ ಹೇಳಿದರು.
ಅವರು ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ 2024-25 ನೇ ಸಾಲಿನಲ್ಲಿ ದಾಖಲಾತಿಗೆ ಭಿತ್ತಿಚಿತ್ರ, ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.