ಕರಣ್ ಜೋಹರ್ ಮೇಲೆ ಕೋಪಗೊಂಡ ಸಾರಾ ಅಲಿ ಖಾನ್: ಸಾರಾ-ಕಾರ್ತಿಕ್ ರ ಸಂಬಂಧವನ್ನು ಸಾರ್ವಜನಿಕಗೊಳಿಸಿದ್ದಕ್ಕೆ ಸಾರಾಗೆ ಬೇಸರ!

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೆಲ ದಿನಗಳಿಂದ ಕರಣ್ ಜೋಹರ್ ಮೇಲೆ ಕೋಪಗೊಂಡಿದ್ದಾರಂತೆ. ಇತ್ತೀಚೆಗೆ ಸಾರಾಗೆ ಸಂಬಂಧಿಸಿದ ಮೂಲವೊಂದು ಇದನ್ನು ಬಹಿರಂಗಪಡಿಸಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಕರಣ್ ಅವರು ಸಾರಾ ಮತ್ತು ಕಾರ್ತಿಕ್ ರ ಸಂಬಂಧವನ್ನು ದೃಢಪಡಿಸಿದ್ದರು. ಈ ಕಾರಣದಿಂದಾಗಿ ಸಾರಾ ಕರಣ್‌ರೊಂದಿಗೆ ಅಸಮಾಧಾನಗೊಂಡಿದ್ದಾರೆ. ಏಕೆಂದರೆ ನಟಿ ತನ್ನ ವೈಯಕ್ತಿಕ ಜೀವನದ ಸಂಗತಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಬಹುದು ಎಂದು ಭಾವಿಸಿದ್ದಾರೆ.
ಕರಣ್‌ರೊಂದಿಗೆ ಸಾರಾ ಈವಾಗ ಸಂತೋಷವಾಗಿಲ್ಲವಂತೆ:
ಸಾರಾ ಅವರ ಆಪ್ತ ಮೂಲವೊಂದು “ಕರಣ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರುವುದರಿಂದ ಸಾರಾಗೆ ಅಸಮಾಧಾನವಾಗಿದೆ. ಪ್ರೇಕ್ಷಕರು ತನ್ನ ವೃತ್ತಿಜೀವನದ ಗ್ರಾಫ್ ಮೇಲೆ ಮಾತ್ರ ದೃಷ್ಟಿ ಕೇಂದ್ರೀಕರಿಸಬೇಕೆಂದು ಸಾರಾ ಅವರು ಬಯಸುತ್ತಾರೆ”.
ಬಾಲಿವುಡ್‌ನಲ್ಲಿ ಹೆಸರು ಮಾಡಲು ಸಾರಾ ಈವಾಗ ತುಂಬಾ ಶ್ರಮಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ವೈಯಕ್ತಿಕ ಜೀವನದ ಮಾತುಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಬಹುದು ಮತ್ತು ಇದು ಬೇರೆಯೇ ಪರಿಣಾಮವನ್ನು ಕಾಣಿಸುವ ಸಾಧ್ಯತೆಗಳನ್ನು ಅವರು ಬಯಸುವುದಿಲ್ಲ.
ಸಾರಾ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದಕ್ಕೆ ಈವಾಗ ವಿಷಾದಿಸುತ್ತಾರೆ.
“ಈ ಘಟನೆಯಿಂದ ಸಾರಾ ಮತ್ತೆ ಕರಣ್ ಜೊತೆ ಮಾತನಾಡುವುದಿಲ್ಲ ಎಂದು ಅರ್ಥ ಅಲ್ಲ, ಆದರೆ ತನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿಸಿದ್ದಕ್ಕಾಗಿ ಸಾರ್ವಜನಿಕವಾಗಿ ವಿಷಾದಿಸುತ್ತಾರೆ. ಏಕೆಂದರೆ ಅವರು ತುಂಬಾ ಸಮರ್ಪಿತ ನಟಿ ಮತ್ತು ಜನರು ತಮ್ಮ ಫಿಲ್ಮ್ ಗಳತ್ತ ಗಮನ ಹರಿಸಬೇಕೆಂದು ಬಯಸುತ್ತಾರೆ. ಅವರು ತನ್ನ ವೃತ್ತಿಜೀವನದ ಮೇಲೆ ಹೆಚ್ಚು ಗಮನಹರಿಸಿದ್ದಾರೆ” ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ.
ಕರಣ್ ಜೋಹರ್ ಮತ್ತು ಸಾರಾ ಅಲಿ ಖಾನ್ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಸಾರಾ ಶೀಘ್ರದಲ್ಲೇ ’ಕಾಫಿ ವಿದ್ ಕರಣ್ ೭’ ರಲ್ಲಿ ಜಾನ್ವಿ ಕಪೂರ್ ಎದುರು ಕಾಣಿಸಿಕೊಳ್ಳಲಿದ್ದಾರೆ.
ಕಾರ್ತಿಕ್ ಸಾರಾ ಅವರನ್ನು ಸಾಮಾಜಿಕ ಮಾಧ್ಯಮದಿಂದ ಅನ್‌ಫಾಲೋ ಮಾಡಿದ್ದಾರೆ:
ತನಗೆ ಕಾರ್ತಿಕ್ ಮೇಲೆ ಕ್ರಶ್ ಇದೆ ಎಂದು ಸಾರಾ ತನ್ನ ತಂದೆ ಸೈಫ್ ಅಲಿ ಖಾನ್‌ಗೆ ಕಾಫಿ ವಿದ್ ಕರಣ್ ಇದರಲ್ಲಿ ಹೇಳಿದ್ದರು. ಇದರೊಂದಿಗೆ ಕಾರ್ತಿಕ್ ಜೊತೆ ಡೇಟ್ ಮಾಡುವ ಆಸೆಯನ್ನೂ ಸಾರಾ ವ್ಯಕ್ತಪಡಿಸಿದ್ದರು. ಹೀಗಿರುವಾಗ ಇವರಿಬ್ಬರು ‘ಲವ್ ಆಜ್ ಕಲ್ ೨’ ಫಿಲ್ಮ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದಾಗ ಇವರಿಬ್ಬರ ಅಫೇರ್ ಬಗ್ಗೆ ವದಂತಿಗಳು ಹಬ್ಬತೊಡಗಿದವು. ಸಿನಿಮಾ ರಿಲೀಸ್ ಆದ ಮೇಲೆ ಇವರಿಬ್ಬರ ಅಫೇರ್ ಬಗ್ಗೆ ಸುದ್ದಿಯೂ ಆಯಿತು. ಕಾರ್ತಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಸಾರಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಕೂಡ ಬಂದಿದೆ.
ಕಾರ್ತಿಕ್ ಆರ್ಯನ್ ಅವರ ಮುಂಬರುವ ಯೋಜನೆಗಳು: ಕಾರ್ತಿಕ್ ಈ ದಿನಗಳಲ್ಲಿ ’ಭೂಲ್ ಭುಲಯ್ಯ ೨’ ಫಿಲ್ಮ್ ನ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಇದಾದ ನಂತರ ಅವರು ‘ಶೆಹಜಾದಾ’ ಫಿಲ್ಮ್ ನ ಚಿತ್ರೀಕರಣ ನಡೆಸಲಿದ್ದಾರೆ. ಶೆಹಜಾದಾ ಅಲ್ಲು ಅರ್ಜುನ್ ಅವರ ತಮಿಳು ಫಿಲ್ಮ್ ಅಲಾ ವೈಕುಂಠಪುರಮುಲು ಇದರ ಹಿಂದಿ ರಿಮೇಕ್ ಆಗಿದೆ. ಕಾರ್ತಿಕ್ ಜೊತೆಗೆ ಪರೇಶ್ ರಾವಲ್, ರೋಹಿತ್ ಬೋಸ್ ರಾಯ್, ಮನಿಶಾ ಕೊಯಿರಾಲಾ, ಸಚಿನ್ ಖೇಡ್ಕರ್ ಮತ್ತು ಅಂಕುರ್ ರಾಠಿ ಕೂಡ ರೋಹಿತ್ ಧವನ್ ನಿರ್ದೇಶನದ ’ಶೆಹಜಾದಾ’ ದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಇದು ೪ ನವೆಂಬರ್ ೨೦೨೨ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಫಿಲ್ಮ್ ನ ಹೊರತಾಗಿ ಕಾರ್ತಿಕ್ ಶೀಘ್ರದಲ್ಲೇ ’ಫ್ರೆಡ್ಡಿ’ ಮತ್ತು ’ಸತ್ಯನಾರಾಯಣ ಕಿ ಕಥಾ’ ಫಿಲ್ಮ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಥ್ವೀರಾಜ್…. ನಂತರ ಹೊಸ ಫಿಲ್ಮ್ ನಲ್ಲಿ ಮಾನುಷಿ ಛಿಲ್ಲರ್

ಬಾಲಿವುಡ್ ನಟಿ ಮಾನುಷಿ ಛಿಲ್ಲರ್ ಅವರು ಅಕ್ಷಯ್ ಕುಮಾರ್ ರೊಂದಿಗೆ ’ಸಾಮ್ರಾಟ್ ಪೃಥ್ವಿರಾಜ್’ ಫಿಲ್ಮ್ ನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಫಿಲ್ಮ್ ತೆರೆಯ ಮೇಲೆ ಹೆಚ್ಚು ಸುದ್ದಿ ಮಾಡದಿದ್ದರೂ, ಮಾನುಷಿ ಛಿಲ್ಲರ್ ತನ್ನ ನಟನೆಯಿಂದ ಜನರ ಹೃದಯವನ್ನು ಗೆದ್ದರು. ಅದೇ ಸಮಯದಲ್ಲಿ ನಟಿಯ ಬಗ್ಗೆ ಮತ್ತೊಂದು ದೊಡ್ಡ ಸುದ್ದಿ ಹೊರಬೀಳುತ್ತಿದೆ.


ಈಗ ಮಾನುಷಿ ಅವರ ಕೈಯಲ್ಲಿ ಕೆಲವು ಫಿಲ್ಮ್ ಗಳಿವೆ ಎಂದು ವರದಿಯಾಗಿದೆ. ’ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಫಿಲ್ಮ್ ನಲ್ಲಿ ನಟ ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ. ಅಲ್ಲಿ ಮಾನುಷಿ ಛಿಲ್ಲರ್ ತಮ್ಮ ಮೂರನೇ ಫಿಲ್ಮ್ ಗೂ ಸಹಿ ಹಾಕಿದ್ದಾರೆ. ಮಾನುಷಿ ಮತ್ತೊಂದು ದೊಡ್ಡ ಫಿಲ್ಮ್ ಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಯುರೋಪ್‌ನಲ್ಲಿ ಚಿತ್ರೀಕರಣಗೊಳ್ಳಲಿರುವ ಫಿಲ್ಮ್ ಆ?ಯಕ್ಷನ್ ಎಂಟರ್‌ಟೈನರ್.
“ಮಾನುಷಿ ಶೀಘ್ರದಲ್ಲೇ ಯುಕೆ, ಫ್ರಾನ್ಸ್ ಮತ್ತು ಯುರೋಪ್‌ನ ಇತರ ಭಾಗಗಳಿಗೆ ತೆರಳಲಿದ್ದಾರೆ, ಇದು ಅವರ ಆರಂಭಿಕ ಶೂಟಿಂಗ್ ವೇಳಾಪಟ್ಟಿಗಾಗಿ ಕೆಲವು ಸ್ಥಳಗಳಾಗಿವೆ” ಎಂದು ಮೂಲಗಳು ತಿಳಿಸಿವೆ. “ಈ ಆ?ಯಕ್ಷನ್ ಎಂಟರ್‌ಟೈನರ್‌ನಲ್ಲಿ ಮಾನುಷಿ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಇದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಮತ್ತು ನಿರ್ಮಾಪಕರು ತೆರೆಯ ಮೇಲೆ ಹೊಸ ಮುಖವನ್ನು ಬಿತ್ತರಿಸಲು ಬಯಸಿದ್ದಾರೆ. ಅದಕ್ಕಾಗಿಯೇ ಅವರು ಮಾನುಷಿಯನ್ನು ನಟಿಸಲು ಕೇಳಿದ್ದಾರೆ.”
ಮಾನುಷಿ ಅವರು ಹಿಂದಿನ ಸಾಮ್ರಾಟ್ ಪೃಥ್ವಿರಾಜ್ ನಲ್ಲಿ ಚಕ್ರವರ್ತಿ ಪೃಥ್ವಿರಾಜ್ ಅವರ ಗೆಳತಿ ಸಂಯೋಗಿತಾ ಪಾತ್ರದಲ್ಲಿದ್ದರು. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಫಿಲ್ಮ್ ನಲ್ಲಿ ಅಕ್ಷಯ್ ಕುಮಾರ್ ಚಕ್ರವರ್ತಿ ಪೃಥ್ವಿರಾಜ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಲನಚಿತ್ರವು ಕ್ರಿ.ಶ.೧೧೯೧ ಮತ್ತು ೧೧೯೨ ರಲ್ಲಿ ಚಕ್ರವರ್ತಿ ಪೃಥ್ವಿರಾಜ್ ಮತ್ತು ಮೊಹಮ್ಮದ್ ಘೋರಿ ನಡುವಿನ ಯುದ್ಧವನ್ನು ಚಿತ್ರಿಸುತ್ತದೆ.ಆದರೆ ಅದು ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡಿತು.