ಕರಣಯ್ಯಸ್ವಾಮಿ ಅವರಿಗೆ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ

ಫರಹತಾಬಾದ :ಜ.14: ವೈದಿಕ ಚಾರಿಟಬಲ್ ಟ್ರಸ್ಟ (ಮಹಾಲಕ್ಷ್ಮಿ ಗುರುಕುಲ) ಬೆಂ. ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ ಬೆಂಗಳೂರು ವೀರಶೈವ ಲಿಂಗಾಯತ ಸಂಘಟನಾ ವೇಧಿಕೆ ಪುರೋಹಿತರ ಘಟಕ ಇವರುಗಳ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ವೀರಶೈವ ಅರ್ಚಕರ ಪುರೋಹಿತರ ಹಾಗೂ ಆಗಮಿಕರ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲರ ಸಹಯೋಗದಲ್ಲಿ ವೈಧಿಕ ವೃತ್ತಿಯಲ್ಲಿ ಸಾಧನೆ ಗೈದ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ವೈಧಿಕರಾದ ಶ್ರೀ ವೇ.ಮೂ . ಕರಣಯ್ಯ ಸ್ಥಾವರಮಠ ಅವರಿಗೆ “ರಾಷ್ಟ್ರೀಯ ವೈಧಿಕ ಶಿರೋಮಣಿ ಪ್ರಶಸ್ತಿ”ನೀಡಿ ಗೌರವಿಸಲಾಗುತ್ತಿದೆ ಎಂದು ವೈದಿಕ ಚಾರಿಟಬಲ್ ಟ್ರಸ್ಟ (ಮಹಾಲಕ್ಷ್ಮಿ ಗುರುಕುಲ) ಸಂಸ್ಥಾಪಕರಾದ ಡಾ|| ಕೆ.ಎನ್. ರಾಜಕುಮಾರ ಶಾಸ್ತ್ರಿಗಳು ತೀಳಿಸಿದ್ದಾರೆ.

ಕರಣಯ್ಯ ಅವರು ಹೊನ್ನಕಿರಣಗಿ ಗ್ರಾಮದ ಶ್ರೀ ಷ.ಬ್ರ. ಕರಿಬಸವೇಶ್ವರ ಶಿವಾಚಾರ್ಯ ಶ್ರೀ ರಾಚೊಟೆಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ.ಷ.ಬ್ರ. ಚಂದ್ರಗುಂಡ ಶಿವಾಚಾರ್ಯರ ಶಿಷ್ಯರಾಗಿ ಸೇವೆ ಗೈಯುತಿದದು ಸುಮಾರು 15 ವರ್ಷಗಳಿಂದ ಶ್ರೀ ಮಠದ ಪುರೋಹಿತ ಹಾಗೂ ಜಂಗಮ ವಟುಗಳಿಗೆ ಧರ್ಮ ಸಂಸ್ಕಾರ ಬೋದಿಸುತ್ತಿದ್ದಾರೆ. ಕರಣಯ್ಯ ಅವರ 2000 ಕ್ಕು ಹೆಚ್ಚು ಜಂಗಮ ವಟುಗಳಿಗೆ ಸಂಸ್ಕøತ ಪಾಠ ಹೇಳಿದ್ದಾರೆ. ಶ್ರೀ ಮಠದ ಕಾರ್ಯಗಳಲ್ಲಿ ಮಾರ್ಗದರ್ಶಕ ವೈದೀಕರಾಗಿ ಗೋ ಪೂಜೆ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

ರಂಭಾಪುರಿ ಪೀಠದಲ್ಲಿ ಸಂಸ್ಕøತ ಪದವಿ ಮುಗಿಸಿದ ಇವರು ಅನೇಕ ಹೊಸ ವೈಧಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಈ ಸೇವೆಯನ್ನು ಪರಿಗಣಿಸಿ ಆಲಮೇಲ ಶ್ರೀಮಠದಿಂದ “ವೈಧಿಕ ಶಿರೋಮಣಿ” ಹಾಗೂ ನಾಲವಾರ ಶ್ರೀಮಠದಿಂದ “ವೈಧಿಕ ಚತುರ”ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಇವರ ಧಾರ್ಮಿಕ ಸೇವೆಯನ್ನು ಗಮನಿಸಿ ವೈಧಿಕ ಟ್ರಸ್ಟ ನವರು ಇದೇ ದಿ. 16 ರಿಂದ 18ರ ವರೆಗೆ ಶ್ರೀ ಸುಜ್ಞಾನ ಬಸವೇಶ್ವರ ಕಲ್ಯಾಣ ಮಂಟಪ ವಿಜಯ ನಗರ ಮನುವನ ಮೆಟ್ರೋ ಸ್ಪೆಷನ ಪಕ್ಕ ಬೆಂಗಳೂರುನಲ್ಲಿ ನಡೆಯುವ ನೂತನ ಗೃಹ ಪ್ರವೇಶ ಉದ್ಘಾಟನ ಸಮಾರಂಭದಲ್ಲಿ ದಿ. 18 ರಂದು ಬೆಳಗ್ಗೆ 10.30ಕ್ಕೆ ವೈದಿಕ ಚಾರಿಟಬಲ್ ಟ್ರಸ್ಟ (ಮಹಾಲಕ್ಷ್ಮಿ ಗುರುಕುಲ) ಸಂಸ್ಥಾಪಕರಾದ ಡಾ|| ಕೆ.ಎನ್. ರಾಜಕುಮಾರ ಶಾಸ್ತ್ರಿಗಳು ಹಾಗೂ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಉಪಸ್ಥೀತಿಯಲ್ಲಿ ವೇ.ಮೂ ಕರಣಯ್ಯ ಸ್ವಾಮಿ ಸ್ಥಾವರ ಮಠ ಅವರಿಗೆ “ರಾಷ್ಟ್ರೀಯ ವೈಧಿಕ ಶಿರೋಮಣಿ ಪ್ರಶಸ್ತಿ” ನೀಡಲಾಗುತ್ತಿದೆ.