ಕರಡಿ ದಾಳಿ, ರೈತನಿಗೆ ತೀವ್ರ ಗಾಯ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 15 :- ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಹೋಗಿದ್ದ ರೈತನೋರ್ವನ ಮೇಲೆ ಮರಿಗಳ ಕರಡಿಯೊಂದು ದಾಳಿ ನಡೆಸಿದ ಪರಿಣಾಮ ತೀವ್ರ ಗಾಯಗೊಳಿಸಿರುವ ಘಟನೆ ಭಾನುವಾರ  ನಸುಕಿನ ಜಾವ ತಾಲೂಕಿನ ಕುರಿಹಟ್ಟಿ ಗ್ರಾಮದ ಹೊರವಲಯದಲ್ಲಿ ಜರುಗಿದೆ..
ಕುರಿಹಟ್ಟಿ ಗ್ರಾಮದ ರೈತ ಸುಪತ್ರ (30) ಎಂಬುವವರೇ ಕರಡಿ ದಾಳಿಯಿಂದ ಗಾಯಗೊಂಡವರಾಗಿದ್ದು .ಬೇಸಿಗೆಯಿಂದ ಎಲ್ಲಿಯೂ ಆಹಾರ ಸಿಗದೇ ಕಾಡಿನಿಂದ ತನ್ನ ಮರಿಗಳೊಂದಿಗೆ ಕರಡಿಯೊಂದು ತೋಟಕ್ಕೆ ಬಂದಿದ್ದು, ಅದೇ ಸಮಯದಲ್ಲಿ ರೈತ ಸುಪುತ್ರ ಅವರು ತೋಟಕ್ಕೆ ನೀರು ಹಾಯಿಸಲು ಬಂದಿದ್ದಾರೆ. ಆಗ ತನ್ನ ಮರಿಗಳ ರಕ್ಷಣೆಗಾಗಿ ದೊಡ್ಡ ಕರಡಿ ದಾಳಿ ಮಾಡಿ ಆತನ ಮುಖಕ್ಕೆ ಉಗುರಿನಿಂದ ಪರಚಿ ತೀವ್ರ ಗಾಯಗೊಳಿಸಿದೆ ಎನ್ನಲಾಗಿದೆ. ಗಾಯಾಳು ಸುಪುತ್ರ ಅವರನ್ನು ತಕ್ಷಣವೇ ಚಿಕ್ಕಜೋಗಿಹಳ್ಳಿ ಸರಕಾರಿಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ ಎಂದು ತಿಳಿದಿದೆ