ಕರಡಿಮೋಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಾಂಭೋತ್ಸವ ಮತ್ತು ದಾಖಲಾತಿ ಆಂದೋಲನಾ

ಸಂಜೆವಾಣಿ ವಾರ್ತೆ
ಚಾಮರಾಜನಗರ.ಜೂನ್.01:- ಚಾಮರಾಜನಗರ ತಾಲ್ಲೂಕಿನ ಕರಡಿಮೋಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಅಣತೆಯೊಡನೆ ಕನ್ನಡ ಶಲ್ಯವನ್ನು ಧರಿಸಿ ಶಾಲೆಗೆ ಇಂದು ಮಕ್ಕಳು ಹಾಜರದ್ದರು.
ವಿದ್ಯಾರ್ಥಿಗಳನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಶಾಲೆಯ ಮುಖ್ಯಶಿಕ್ಷರು ಹಾಗೂ ಶಿಕ್ಷಕರು ಸಿಹಿ ನೀಡಿ ಸ್ವಾಗತ ಕೋರಿದರು.
ನಂತರ ವಿದ್ಯಾರ್ಥಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲಾ ದಾಖಲಾತಿ ಆಂದೋಲನ ಜಾಗೃತಿ ನಡೆಸಿದರು. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎಂಬ ಗೋಷಣೆ ಕೂಗುತ್ತ ಬೀದಿ ಬೀದಿಗಳಲ್ಲಿ ನಡೆದರು.
5 ವರ್ಷ 5 ತಿಂಗಳು ತುಂಬಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ ಎಂದು ಮನೆ ಮನೆಗಳಿಗೆ ತಿಳಿಸುತ್ತ ಮುಂದೆ ನಡೆದರು.
ಶಾಲಾ ಪ್ರಾರಾಂಭೋತ್ಸವ ಮತ್ತು ದಾಖಲಾತಿ ಆಂದೋಲನಾ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಿರುವ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಜ್ಯೋತಿಅಂಕೇಶ್ ಹಾಗೂ ಸದಸ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಸುಮಿತ್ರ, ಚೈತ್ರ, ಮಂಜುಳ, ರಕ್ಷಿತಾ, ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಬಿ.ಎಸ್.ಲತಾ, ಹಾಗೂ ಸಹಶಿಕ್ಷಕ ಸೋಮಣ್ಣ ಹಾಜರಿದ್ದರು.