ಕರಡಿದಾಳಿಯಿಂದ ಗಾಯಗೊಂಡ ರೈತ.ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯಾಧಿಕಾರಿ.

ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 24 :- ಇಂದು ನಸುಕಿನ ಜಾವ ಕರಡಿಗಳ ದಾಳಿಯಿಂದ ತೀವ್ರಗಾಯಗೊಂಡ ಶರಣಯ್ಯ ಎಂಬಾತನನ್ನು ಬಳ್ಳಾರಿ ವಿಮ್ಸ್ ಗೆ ಚಿಕಿತ್ಸೆಗೆ ದಾಖಲಾಗಿಸಲಾಗಿದ್ದು ಗುಡೇಕೋಟೆ ವಲಯ ಅರಣ್ಯ ಅಧಿಕಾರಿ ರೇಣುಕಾ ಇಂದು  ಮಧ್ಯಾಹ್ನ ಬಳ್ಳಾರಿ ವಿಮ್ಸ್ ಗೆ ಭೇಟಿ ಮಾಡಿ ಗಾಯಳು ಅರೋಗ್ಯ ವಿಚಾರಣೆ ನಡೆಸಿ ಅಲ್ಲಿನ ವೈದ್ಯರ ಚಿಕಿತ್ಸಾ ಮಾಹಿತಿ ಪಡೆದುಕೊಂಡರು ಮತ್ತು ಪರಿಹಾರದ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಹೋದ್ಯೋಗಿಗಳಿದ್ದರು.