ಲಿಂಗಸುಗೂರ,ಮಾ.೨೭- ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಡಕಲ್ ಗ್ರಾಮದಲ್ಲಿ ಪ್ರತಿ ವರ್ಷ ದಂತೆ ಈ ವರ್ಷ ವು ಕೂಡ ನಾಳೆಯಿಂದ ದಿನಾಂಕ ೨೮ ರಿಂದ ೩೦ರವರಗೆ ನಡೆಯಲಿರುವ ಶ್ರೀ ಸಿದ್ಧಾರೂಢ ಮಠದ ಶ್ರೀ ಮಠದ ಸಹಜಾನಂದ ಅವಧೂತರು ನೇತೃತ್ವದಲ್ಲಿ ನಡೆಯುತ್ತಿರುವ ೨೧ನೇ ವೇದಾಂತ ಪರಿಷತ್ ಹಾಗೂ ಸಾಮೂಹಿಕ ವಿವಾಹ ಜರುಗಲಿವೆ ಎಂದು ಕೃಷ್ಣಾನಂದ ಅವಧೂತರು ಹೇಳಿದರು.
ಲಿಂಗಸುಗೂರ ತಾಲ್ಲೂಕಿನ ಪ್ರೇಕ್ಷಣೀಯ ಕ್ಷೇತ್ರ ಕರಡಕಲ್ ಗ್ರಾಮದ ಆರಾಧ್ಯ ದೈವ ಸಿದ್ದಾರೂಢ ಶ್ರೀ ಗಳ ಪಲ್ಲಕ್ಕಿ ಉತ್ಸವ ಹಾಗೂ ಕೊನೆಯ ದಿನ ರಥೋತ್ಸವ ಜರುಗುತ್ತದೆ ಅಂದು ರಥೋತ್ಸವದ ಅಂಗವಾಗಿ ಸುತ್ತ ಮುತ್ತ ಇರುವ ಗ್ರಾಮಗಳ ಜನರು ರಥೋತ್ಸವದಲ್ಲಿ ಪಾಲ್ಗೊಂಡು ಸಿದ್ಧಾರೂಢ ಸ್ವಾಮಿಗಳ ಆಶೀರ್ವಾದ ಪಡೆದು ಪುನೀತ್ ರಾಗಿ ಸಹಜಾನಂದ ಅವಧೂತರು ಆಶಿರ್ವಚನ ಪಡೆದು ಕೊಂಡು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಮನನಮಾಡಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಾಡಿನ ಹರಗುರು ಚರಮೂರ್ತಿ ಗಳು ರಾಜಕೀಯ ಮುಖಂಡರು ಗ್ರಾಮದ ಜನರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ಮ್ಯಾಗಳಮನಿ, ಮೋಹನ್ ಗೋಸಲೆ, ಅಮರೇಶ ಮ್ಯಾಗೇರಿ, ಶ್ರೀರಾಂ ಮ್ಯಾಗಳಮನಿ ಸೇರಿದಂತೆ ಇತರರು ಸಂಜೆ ವಾಣಿ ಪತ್ರಿಕೆ ವರದಿಗಾರರು ಭೇಟಿ ಮಾಡಿ ಮಾಹಿತಿ ತಿಳಿಸಿದರು.