ಕರಡಕಲ್ ಗ್ರಾಮದಲ್ಲಿ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗೆ ಚಾಲನೆ

ಕೆಂಭಾವಿ:ಮಾ.7: ಕೆಂಭಾವಿ ಪಟ್ಟಣದ ಸಮೀಪ ಇರುವ ಕರಡಕಲ್ ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಶರಣಬಸಪ್ಪಗೌಡ ದರ್ಶನಾಪುರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾವಳಿಗೆ ಉದ್ಘಾಟಿಸಿದ ಶಹಾಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಮಾತನಾಡಿದರು.
ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ದಿನಮಾನದಲ್ಲಿ ಗ್ರಾಮೀಣ ಕ್ರೀಡೆ ನಶಿಸಿ ಹೋಗುತ್ತಿವೆ, ಗ್ರಾಮೀಣ ಕ್ರೀಡೆಗೆ ಹೆಚ್ಚು ಮಹತ್ವ ನೀಡಬೇಕು. ಆಟದ ಜೊತೆಗೆ ಯುವಕರು ಪಾಠದಕಡೆಗೂ ಗಮನಹರಿಸಬೇಕು ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ದೇಹ, ಮನಸ್ಸು ಸದೃಢವಾಗಿರುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಯುವಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಾಲಿಬಾಲ್ ಹಾಗೂ ಹೊನಲು ಬೆಳಕಿನ ಕಬಡ್ಡಿ ಹಾಗೂ ವಾಲಿಬಾಲ್ ಟೂರ್ನಿ ಆಯೋಜಿಸಿರುವ ಗ್ರಾಮದ ಯುವಕರ ತಂಡದ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ
ಪರಮ ಪೂಜ್ಯ ಶ್ರೀ ಶಾಂತ ರುದ್ರಮುನಿ ಸ್ವಾಮೀಜಿ ಕರಡಕಲ್, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಎಸ್ ಪಾಟೀಲ ಚಿಂಚೋಳಿ, ಬಸನಗೌಡ ಪಾಟೀಲ ಹೊಸಮನಿ ಯಾಳಗಿ, ಮಹಾದೇವಪ್ಪ ಸಾಲಿಮನಿ, ಅಮೀನರೆಡ್ಡಿ ಬಿರಾದಾರ ಕಿರದ್ದಳ್ಳಿ, ಸಂಗನಗೌಡ ಮರಡ್ಡಿ, ಶಿವನಗೌಡ ಮಂಗಳೂರು, ಸಿದ್ದಣ ಚಾಮನೂರ, ಭೀಮಣ್ಣ ನಾರಾಯಣಪುರ, ಹಣಮಂತರೆಡ್ಡಿ ಮೇಟಿ, ಮಾನಶೆಪ್ಪ ಕರಡಕಲ್, ಧರ್ಮೀಬಾಯಿ ರಾಠೋಡ, ಮಡಿವಾಳಪ್ಪಗೌಡ ಪಾಟೀಲ ಹೆಗ್ಗನದೋಡ್ಡಿ, ಶಿವಪ್ರಕಾಶ್ ಸ್ವಾಮಿ, ರಾಯಪ್ಪ, ಗುಡಿಮನಿ ಸೇರಿದಂತೆ ಕ್ರೀಡಾಪಟುಗಳು ಹಾಗೂ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.